HEALTH TIPS

ನಿಧನ ರಿಜಿಸ್ಟರ್‍ನಲ್ಲಿ ಮೃತಪಟ್ಟ ಮಹಿಳೆಯ ಪತಿಯ ಹೆಸರು ಬದಲಾಯಿಸಿ ವಂಚನೆ: ತನಿಖೆ ಆರಂಭ

ಉಪ್ಪಳ:  ರಿಜಿಸ್ಟರ್‍ನಲ್ಲಿ ಮೃತಪಟ್ಟ ಮಹಿಳೆಯ ಪತಿಯ ಹೆಸರನ್ನು ತಿದ್ದುಪಡಿಮಾಡಿ ವಂಚನೆ ನಡೆಸಿರುವುದಾಗಿ ದೂರಲಾಗಿದೆ. ಪೈವಳಿಕೆ ಪಂಚಾಯತಿ ಕಾರ್ಯದರ್ಶಿ ಕಾಸರಗೋಡು ಎಎಸ್‍ಪಿ ಅಶೋಕ್ ಅಚ್ಯುತನ್‍ರಿಗೆ ನೀಡಿದ ದೂರಿನ ಪ್ರಕಾರ ಮಂಜೇಶ್ವರ ಪೋಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 

2011ರ  ನಿಧನ ರಿಜಿಸ್ಟರ್‍ನಲ್ಲಿ  ವಂಚನೆ ನಡೆಸಿರುವುದಾಗಿ ದೂರಲಾಗಿದೆ. 2011 ಆ. 17 ರಂದು ಮೃತಪಟ್ಟ ಕಮಲ ಎಂಬವರ ಪತಿಯ ಹೆಸರು ತುಕ್ರ ಎಂದು ದಾಖಲಿಸಲಾಗಿತ್ತು. ಇದನ್ನು ತಿರುಚಿ ಗುರುವ ಎಂದು ಬರೆದು ವಂಚನೆ ನಡೆಸಲಾಗಿದೆ ಎಂಬುದಾಗಿ ದೂರಲಾಗಿದೆ. ಈ ವಂಚನೆ ನಡೆಸಿದವರು ಯಾರೆಂದು, ಯಾವ ಉದ್ದೇಶದಿಂದ ಇದನ್ನು ನಡೆಸಲಾಗಿದೆಯೆಂದು ತಿಳಿದುಬಂದಿಲ್ಲ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಆರೋಪಿಯಾಗಿ ಸೇರಿಸಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆಯೆಂದು ಪೋಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries