HEALTH TIPS

ಫ್ರಾನ್ಸ್‌ ಕಾಡ್ಗಿಚ್ಚು: ಮ್ಯಾಕ್ರನ್‌ ತುರ್ತು ಸಭೆ

 ಲೇಗ್‌ ಕ್ಯಾಪ್ ಫೆರ‍್ರೆಟ್:  ಫ್ರಾನ್ಸ್‌ನಲ್ಲಿ ವ್ಯಾಪಿಸುತ್ತಿರುವ ಕಾಡ್ಗಿಚ್ಚನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌ ಸೋಮವಾರ ತುರ್ತು ಸಭೆ ನಡೆಸಿದ್ದಾರೆ.


ನೈರುತ್ಯ ಫ್ರಾನ್ಸ್‌ನ ಗಿರೊಂಡೆ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ತೀವ್ರವಾಗಿದ್ದು, ಪ್ಯಾರೀಸ್‌ಗಿಂತಲೂ ನಾಲ್ಕು ಪಟ್ಟು ದೊಡ್ಡದಾಗಿರುವ ಪ್ರದೇಶವನ್ನು ಆಹುತಿ ಪಡೆದಿದೆ.

ಈಗಾಗಲೇ 2.50 ಲಕ್ಷ ಮಂದಿ ತಮ್ಮ ಮನೆಗಳನ್ನು ತೊರೆಯುವಂತಾಗಿದೆ.

ಕಳೆದ ಒಂದು ವಾರದಿಂದ ತೀವ್ರವಾಗಿದ್ದ ಕಾಡ್ಗಿಚ್ಚು ಇದೀಗ ವೈನ್‌ ಪ್ರಾಂತ್ಯಕ್ಕೆ ಸಮೀಪಿಸುತ್ತಿರುವಂತೆಯೇ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೂ, ಮಂಗಳವಾರದಿಂದ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆ ಇರುವ ಕಾರಣ ಕಾಡ್ಗಿಚ್ಚು ಮತ್ತಷ್ಟು ತೀವ್ರಗೊಳ್ಳದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.

ಸಭೆಗೂ ಮುನ್ನ 'ಎಕ್ಸ್‌'ನಲ್ಲಿ ಮಾಹಿತಿ ಹಂಚಿಕೊಂಡಿದ್ದಮ್ಯಾಕ್ರನ್‌, 'ಕಾಡ್ಗಿಚ್ಚಿನಿಂದ ತೊಂದರೆಗೀಡಾದ ಕುಟುಂಬಗಳಿಗೆ ಎಲ್ಲಾ ಅಗತ್ಯ ನೆರವು ನೀಡಲಾಗುವುದು. ಆಹುತಿಗೀಡಾದ ಪ್ರದೇಶಗಳನ್ನು ನಾವು ಪುನಃ ನಿರ್ಮಿಸುತ್ತೇವೆ, ಅಗತ್ಯವಿರುವವರೆಗೂ ಜತೆಗಿರುತ್ತೇವೆ' ಎಂದೂ ಭರವಸೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries