HEALTH TIPS

ಇರಾನ್ ಸಂಧಾನಕಾರರ ಹತ್ಯೆಗೆ ಇಸ್ರೇಲ್‌ ಸಂಚು : ಅಮೆರಿಕದಿಂದ ಇರಾನ್‌ಗೆ ಎಚ್ಚರಿಕೆ; ವರದಿ

 ವಾಷಿಂಗ್ಟನ್: ಇರಾನ್-ಅಮೆರಿಕ ಶಾಂತಿ ಮಾತುಕತೆ ಮಧ್ಯೆ ಇರಾನ್‌ನ ಇಬ್ಬರು ಪ್ರಮುಖ ಸಂಧಾನಕಾರರ ಹತ್ಯೆಗೆ ಇಸ್ರೇಲ್ ಪ್ರಯತ್ನಿಸಬಹುದು ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಖಾಸಗಿಯಾಗಿ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂದು ʼದಿ ವಾಷಿಂಗ್ಟನ್ ಪೋಸ್ಟ್ʼ ವರದಿ ಮಾಡಿದೆ. 


ಈ ವಿಷಯವನ್ನು ತಿಳಿದಿರುವ ಹಾಲಿ ಮತ್ತು ಮಾಜಿ ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಎಂದು ʼದಿ ವಾಷಿಂಗ್ಟನ್ ಪೋಸ್ಟ್ʼ ವರದಿಯನ್ನು ಪ್ರಕಟಿಸಿದೆ. ಇದಕ್ಕೂ ಮೊದಲು ʼದಿ ನ್ಯೂಯಾರ್ಕ್ ಟೈಮ್ಸ್ʼ ಕೂಡ ಇದೇ ರೀತಿಯ ಮಾಹಿತಿ ಪ್ರಕಟಿಸಿತ್ತು.

ವರದಿಯ ಪ್ರಕಾರ, ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹಾಗೂ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಅವರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ಅಮೆರಿಕ ವ್ಯಕ್ತಪಡಿಸಿದೆ.

ಅಮೆರಿಕ ಯುದ್ಧ ಅಂತ್ಯಗೊಳಿಸಲು ರಾಜತಾಂತ್ರಿಕ ಪ್ರಯತ್ನ ನಡೆಸುತ್ತಿದ್ದ ವೇಳೆ, ಇಂತಹ ಹತ್ಯೆಗಳು ನಡೆದರೆ ಶಾಂತಿ ಮಾತುಕತೆ ಸಂಪೂರ್ಣವಾಗಿ ಹದಗೆಟ್ಟು ಮತ್ತೆ ಯುದ್ಧ ತೀವ್ರವಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಇಬ್ಬರು ಹಿರಿಯ ನಾಯಕರನ್ನು ಇಸ್ರೇಲ್ ಹತ್ಯೆ ಮಾಡಲು ಯತ್ನಿಸಬಹುದು ಎಂದು ಅಮೆರಿಕವು ಮಧ್ಯವರ್ತಿಗಳ ಮೂಲಕ ಇರಾನ್‌ಗೆ ಎಚ್ಚರಿಕೆ ನೀಡಿತ್ತು ಎಂದು ವರದಿ ತಿಳಿಸಿದೆ.

ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅದಕ್ಕೆ ಅಡ್ಡಿಯಾಗುವಂತಹ ದಾಳಿಗಳನ್ನು ನಡೆಸಬಾರದು ಎಂದು ಅಮೆರಿಕ ಈ ಮೊದಲು ಇಸ್ರೇಲ್‌ ಗೆ ಸೂಚಿಸಿತ್ತು. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಯುದ್ಧದ ಬಗ್ಗೆ ಅಮೆರಿಕ ಮತ್ತು ಇಸ್ರೇಲ್‌ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ ಈ ಎಚ್ಚರಿಕೆ ಮೂಲಕ ಬಹಿರಂಗವಾಗುತ್ತದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries