HEALTH TIPS

ಭಾರತೀಯ ಮಜ್ಡೂರ್ ಸಂಘ ಮಂಜೇಶ್ವರ ವಲಯ ಸಮಿತಿ ವಲಯ ಸಮ್ಮೇಳನ

ಮಂಜೇಶ್ವರ: ಭಾರತೀಯ ಮಜ್ಡೂರ್ ಸಂಘ (ಬಿಎಂಎಸ್) ಮಂಜೇಶ್ವರ ವಲಯ ಸಮಿತಿಯ ನೇತೃತ್ವದಲ್ಲಿ ವಲಯ ಸಮ್ಮೇಳನ ಹೊಸಂಗಡಿ ಯೂನಿಟ್ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.


ಬಿಎಂಎಸ್ ಜಿಲ್ಲಾಧ್ಯಕ್ಷರಾದ ಉಪೇಂದ್ರನ್ ಕೋಟೆಕಣಿ ಸಮಾರಂಭ ಉದ್ಘಾಟಿಸಿ ನೀಟ್ ಪರೀಕ್ಷಾ ಪೇಪರ್ ಸೋರಿಕೆ ಹಾಗೂ ಅದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು,   ಅದೇ ವೇಳೆ, ಪ್ರಶ್ನೆಪತ್ರಿಕೆ ಸೋರಿಕೆಯನ್ನು ನೆಪಮಾಡಿಕೊಂಡು ಪಾರ್ಲಿಮೆಂಟ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪುಂಡಾಟಿಕೆ ದೇಶದ ಏಕತೆಮತ್ತು ಅಖಂಡತೆಗೆ ಧಕ್ಕೆ ತಂದೊಡ್ಡುತ್ತಿದ್ದು,  ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಶಕ್ತಿಗಳನ್ನು ಪರಿಣಾಮಕಾರಿಯಾಗಿ ದಮನಿಸಬೇಕಾದ ಅಗತ್ಯವಿದೆ. ದೇಶವನ್ನು ಇಬ್ಬಾಗ ಮಾಡಲು ಯತ್ನಿಸುವವರ ವಿರುದ್ಧ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

ವಲಯಾಧ್ಯಕ್ಷ ರವಿ ಎಂ.ಕೆ. ಕೋಳ್ಯೂರು ಅಧ್ಯಕ್ಷತೆ ವಹಿಸಿದ್ದರು.  

ಸಮಾರೋಪ ಸಮಾರಂಭದಲ್ಲಿ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್, ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪಾಡಿ ಹಾಗೂ ಯಶವಂತಿ ಬೆಜ್ಜ ಉಪಸ್ಥಿತರಿದ್ದರು. ಮುಂಬರುವ ಸಾಲಿಗಾಗಿ ಬಿಎಂಎಸ್ ಮಂಜೇಶ್ವರ ವಲಯದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರವಿ ಎಂ.ಕೆ. ಕೋಳ್ಯೂರು ಅಧ್ಯಕ್ಷ, : ಭಾಸ್ಕರ ಬಿ.ಎಂ.,   ಶ್ರೀಧರ ಪಿ., ವನಿತಾ ಜೆ. ನಾಯ್ಕ್ , ಜಯಲಕ್ಷ್ಮಿ ಚಿಗುರುಪಾದೆ ಉಪಾಧ್ಯಕ್ಷರು,  ಕಿಶೋರ್ ಕುಂಜತ್ತೂರ್ ಪ್ರಧಾನ ಕಾರ್ಯದರ್ಶಿ,  ರಾಮಚಂದ್ರ ಬಟ್ಯಪದವು,   ಸುನಿಲ್ ಭಟ್ರಕಳ,   ಪ್ರಫುಲ್ಲ ಕಳಿಯೂರು,   ಪ್ರಕಾಶ್ ಹೊಸಂಗಡಿ ಜೊತೆ ಕಾರ್ಯದರ್ಶಿಗಳು, ಮನೋಜ್ ಬಟ್ಯಪದವು  ಕೋಶಾಧಿಕಾರಿ,  ರವಿ ಮಜಲ್,  ರವೀಂದ್ರ ಕುಲಾಲ್,  ರೋಹಿತ್ ಬೆಜ್ಜ,  ಗೋಪಾಲ ದೈಗೋಳಿ,  ಬಾಲಕೃಷ್ಣ ಉಜಿರೆ , ಪ್ರದೀಪ್ ತಲಪ್ಪಾಡಿ, ಹರೀಶ್ ದೈಗೋಳಿ  ಮತ್ತು ನಳಿನಿ ಹೊಸಂಗಡಿ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.  ರವೀಂದ್ರ ಕುಲಾಲ್ ಸ್ವಾಗತಿಸಿದರು. ಮನೋಜ್ ಬಟ್ಯಪದವು ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries