HEALTH TIPS

ಇಂದು ಪತ್ರಕರ್ತರಿಗಾಗಿ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ'ವತಿಯಿಂದ 'ಮಾಧ್ಯಮ ಕಾರ್ಯಾಗಾರ'

ಕಾಸರಗೋಡು: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ 'ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ' (ಪಿಐಬಿ) ಕೊಚ್ಚಿ ವತಿಯಿಂದ ಸ್ಥಳೀಯ ಪತ್ರಕರ್ತರಿಗಾಗಿ 'ಮಾಧ್ಯಮ ಕಾರ್ಯಾಗಾರ' ಜುಲೈ 23ರಂದು  ಬೆಳಗ್ಗೆ 9.30ಕ್ಕೆ  ಕಾಸರಗೋಡಿನ 'ಹೈವೇ ಕ್ಯಾಸಲ್' ಸಭಾಂಗಣದಜರುಗಲಿದೆ.

ಕಾಸರಗೋಡು ಜಿಲ್ಲಾಧಿಕಾರಿ  ಅರ್ಜುನ್ ಪಾಂಡಿಯನ್ ಸಮಾರಂಭ ಉದ್ಘಾಟಿಸುವರು.  ಪಿಐಬಿ ಕೇರಳ-ಲಕ್ಷದ್ವೀಪ ವಲಯ ಹೆಚ್ಚುವರಿ ಮಹಾನಿರ್ದೇಶಕ  ವಿ. ಪಳನಿಚಾಮಿ ಐಐಎಸ್ ಅಧ್ಯಕ್ಷತೆ ವಹಿಸುವರು.  ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ  ಸಿಜು ಕಣ್ಣನ್  ಮುಖ್ಯ ಭಾಷಣ ಮಾಡುವರು.

ಪಿಐಬಿ ಕೊಚ್ಚಿ ಮತ್ತು ಆಲ್ ಇಂಡಿಯಾ ರೇಡಿಯೋ ಕೊಚ್ಚಿ ನಿರ್ದೇಶಕಿ ಧನ್ಯಾ ಸನಲ್ ಐಎಎಸ್ ಅತಿಥಿಯಾಗಿ ಭಾಗವಹಿಸುವರು.  ಈಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ  ಸತ್ಯನಾರಾಯಣ ಬೆಳೇರಿ ಮತ್ತು ಹಿರಿಯ ಪತ್ರಕರ್ತ  ಎಂ. ಓ. ವರ್ಗೀಸ್ ಅವರನ್ನು ಸನ್ಮಾನಿಸಲಾಗುವುದು. ವಿವಿಧ ವಿಷಯಗಳ ಬಗ್ಗೆ ತರಗತಿ ನಡೆಯುವುದು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ನೀಡುವ ಉದ್ದೇಶದಿಂದ, ಕಾಸರಗೋಡು ಪ್ರೆಸ್ ಕ್ಲಬ್‍ನ ಸಹಯೋಗದಲ್ಲಿ ಪತ್ರಿಕಾ ಮಾಹಿತಿ ಕಾರ್ಯಾಗಾರ  ಆಯೋಜಿಸಲಾಗುತ್ತಿದೆ.



 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries