HEALTH TIPS

ಯಾವುದೇ ಪರಿಸ್ಥಿತಿಗೂ ಇಸ್ರೇಲ್ ಸಿದ್ಧ : ಇರಾನ್‍ಗೆ ನೆತನ್ಯಾಹು ಎಚ್ಚರಿಕೆ

 ಟೆಲ್ ಅವೀವ್ : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ `ಯುದ್ಧ ಇನ್ನೂ ಮುಗಿದಿಲ್ಲ ಮತ್ತು ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಇಸ್ರೇಲ್ ಸಿದ್ಧವಾಗುತ್ತಿದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್‍ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.


`ದೇಶದ ಭದ್ರತಾ ಕಾರ್ಯತಂತ್ರದಲ್ಲಿ ಇಸ್ರೇಲ್‍ನ ವಾಯು ಪ್ರಾಬಲ್ಯವನ್ನು ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಒಪ್ಪಂದವಿರಲಿ ಅಥವಾ ಇಲ್ಲದಿರಲಿ, ಇರಾನ್ ಪರಮಾಣು ಶಸ್ತ್ರ್ರಾಗಳನ್ನು ಹೊಂದಲು ನಾವು ಬಿಡುವುದಿಲ್ಲ ಎಂಬುದು ನಮ್ಮ ಸ್ಪಷ್ಟ ನೀತಿಯಾಗಿದೆ' ಎಂದು ನೆತನ್ಯಾಹು ಎಂದು ಹೇಳಿದ್ದಾರೆ.

ಈ ಮಧ್ಯೆ, ಜೆರುಸಲೇಮ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್‌ `ಅಗತ್ಯಬಿದ್ದರೆ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಇನ್ನೂ ಹೆಚ್ಚಿನ ಬಲದೊಂದಿಗೆ ಪುನರಾರಂಭಿಸಲು ತನ್ನ ದೇಶ ಸಿದ್ಧವಾಗಿದೆ' ಎಂದು ತಿಳಿಸಿರುವುದಾಗಿ ವರದಿಯಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries