HEALTH TIPS

ಬಾಲಕಿಗೆ ಕಿರುಕುಳ: ಕುಂಬಳೆ ಆಟೋ ಚಾಲಕ ಪೋಕ್ಸೋ ಪ್ರಕರಣದಡಿ ಬಂಧನ

ಕುಂಬಳೆ: 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆಟೋ ಚಾಲಕನನ್ನು ಪೋಕ್ಸೋ ಪ್ರಕಾರ ಬಂಧಿಸಲಾಗಿದೆ. ಕುಂಬಳೆಯ ಆಟೋ ಚಾಲಕ ಬಾವಲಿಮನ ಅಮೀರ್ ಮಂಜಿಲ್‍ನ ಅಬುತಾಹಿರ್ (22) ಎಂಬಾತನನ್ನು ವಿದ್ಯಾನಗರ ಪೋಲೀಸ್ ಇನ್‍ಸ್ಪೆಕ್ಟರ್ ಎಂ.ಪಿ. ವಿಜೀಶ್ ಬಂಧಿಸಿದ್ದಾರೆ.  ವಿದ್ಯಾನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ 17ರ ಹರಯದ ಬಾಲಕಿಗೆ 2022-2023ನೇ ಕಾಲಾವಧಿಯಲ್ಲಿ ಕಿರುಕುಳ ನೀಡಿದ ಪ್ರಕರಣದಲ್ಲಿ ಅಬುತಾಹಿರ್ ಆರೋಪಿಯಾಗಿದ್ದಾನೆಂದು ಪೋಲೀಸರು ತಿಳಿಸಿದ್ದಾರೆ. ಈತ ಎರಡು ದಿನಗಳೊಳಗೆ ಗಲ್ಫ್‍ಗೆ ತೆರಳಲಿರುವ ಸಿದ್ಧತೆಯಲ್ಲಿದ್ದನೆಂದೂ ಹೇಳಲಾಗುತ್ತಿದೆ. ಇತ್ತೀಚೆಗೆ ಬಾಲಕಿಗೆ ಅಸ್ವಸ್ಥತೆ ಕಂಡುಬಂದಿತ್ತೆನ್ನಲಾಗಿದೆ.  ಅಲ್ಲದೆ  ಬಾಲಕಿಯ ಫೆÇೀನ್ ಮನೆಯವರು ಪರಿಶೀಲಿಸಿದ್ದು ಈ ವೇಳೆ ಅಬುತಾಹಿರ್ ಎಂಬ ವ್ಯಕ್ತಿಯೊಂದಿಗೆ ನಿರಂತರ ಚಾಟಿಂಗ್‍ನಲ್ಲಿರುವುದು ಕಂಡುಬಂದಿತ್ತು. ಅನಂತರ  ಬಾಲಕಿಯನ್ನು ಕೌನ್ಸಿಲಿಂಗ್‍ಗೊಳಪಡಿಸಿದಾಗ ಕಿರುಕುಳಕ್ಕೊಳಗಾದ ವಿಷಯ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾನಗರ ಪೆÇಲೀಸರಿಗೆ ದೂರು ನೀಡಿದ್ದು ಇದರಂತೆ ಪೆÇಲೀಸರು ಪೆÇೀಕ್ಸೋ ಪ್ರಕಾರ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries