ಉಪ್ಪಳ: ಉಪ್ಪಳ ರೈಲು ನಿಲ್ದಾಣ ಸನಿಹದ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿ ಕುಂಬ್ಡಾಜೆ ಸನಿಹದ ಮುವ್ವಾರು ನಿವಾಸಿ ಗೋಪಾಲ ಆಚಾರ್ಯ ಎಂಬವರ ಪತ್ನಿ ಜಯಂತಿ (65) ಗಾಯಗೊಂಡಿದ್ದಾರೆ. ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಜುಲೈ 7ರಂದು ಉಪ್ಪಳ ರೈಲು ನಿಲ್ದಾಣ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಜಯಂತಿ ಅವರು ಉಪ್ಪಳ ರೈಲು ನಿಲ್ದಾಣ ರಸ್ತೆಯಲ್ಲಿ ಪತ್ನಾಡಿ ರಸ್ತೆಗೆ ನಡೆದು ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಮಹಿಳೆ ಗಾಯಗೊಂಡ ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

