HEALTH TIPS

'ಎಥೆನಾಲ್ ಹೆಚ್ಚಳ ನಿರ್ಧಾರ ಆಗಿಲ್ಲ': ಕೇಂದ್ರ ಪೆಟ್ರೋಲಿಯಂ ಸಚಿವಾಲಯ

 ನವದೆಹಲಿ (PTI): 'ಪೆಟ್ರೋಲ್‌ನಲ್ಲಿ ಶೇ 20ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡುವ ಬಗ್ಗೆ ಸರ್ಕಾರವು ಇದುವರೆಗೆ ಯಾವುದೇ ನಿರ್ಧಾರ ಮಾಡಿಲ್ಲ' ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. 


ಮುಂದಿನ ದಿನಗಳಲ್ಲಿ ಎಥೆನಾಲ್ ಪ್ರಮಾಣವನ್ನು ಹೆಚ್ಚಳ ಮಾಡಬೇಕಾದರೆ, ವಿವರವಾದ ವೈಜ್ಞಾನಿಕ ಮತ್ತು ತಾಂತ್ರಿಕ ಅಧ್ಯಯನ ನಡೆಸಿ, ವಾಹನ ತಯಾರಿಕಾ ಕಂಪನಿಗಳು, ತೈಲೋತ್ಪನ್ನ ಮಾರಾಟ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಂಸತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.

2013-14ರಲ್ಲಿ ಲೀಟರ್ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಶೇ 1.53ರಷ್ಟಿತ್ತು. ಅದು 2025-26ರ ವೇಳೆಗೆ ಶೇ 20ಕ್ಕೆ ಏರಿಕೆಯಾಗಿದೆ. ಇದರಿಂದ ಈ ಅವಧಿಯಲ್ಲಿ ₹1.97 ಲಕ್ಷ ಕೋಟಿ ವಿದೇಶಿ ವಿನಿಮಯ ಮೀಸಲನ್ನು ಉಳಿಸಲಾಗಿದೆ. ಅಲ್ಲದೆ, 316 ಲಕ್ಷ ಟನ್ ಕಚ್ಚಾ ತೈಲ ಆಮದು ಕಡಿಮೆಯಾಗಿದ್ದು, 952 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ತಗ್ಗಿದೆ. ಎಥೆನಾಲ್ ಉತ್ಪಾದನೆಯಿಂದ ರೈತರಿಗೆ ₹1.66 ಲಕ್ಷ ಕೋಟಿ ಆದಾಯ ದೊರೆತಿದೆ ಎಂದಿದ್ದಾರೆ.

ಎಥೆನಾಲ್ ಬಳಸುವುದರಿಂದ ವಾಹನಗಳ ಎಂಜಿನ್ ಹಾಳಾಗಿರುವುದು, ತುಕ್ಕು ಹಿಡಿಯುವಿಕೆ ಸೇರಿದಂತೆ ಯಾವುದೇ ಸಮಸ್ಯೆ ಕಂಡು ಬಂದಿರುವ ಕುರಿತು ವಾಹನ ತಯಾರಿಕಾ ಕಂಪನಿ ಗಳು, ಆಟೊಮೊಬೈಲ್‌ ಸಂಘಟನೆಗಳು ಅಥವಾ ಗ್ರಾಹಕರಿಂದ ಸಮರ್ಥನೀಯ ದೂರುಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.

2024-25ರ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು 1,033 ಕೋಟಿ ಲೀಟರ್ ಎಥೆನಾಲ್ ಖರೀದಿಸಿದ್ದವು. ಇದು ಹಣಕಾಸಿನ ಮೌಲ್ಯದಲ್ಲಿ ₹73,996 ಕೋಟಿಯಷ್ಟಾಗಿತ್ತು. ಕಳೆದ ಆರ್ಥಿಕ ವರ್ಷದಲ್ಲಿ ₹49,577 ಕೋಟಿ ಮೌಲ್ಯದ 705 ಕೋಟಿ ಲೀಟರ್ ಎಥೆನಾಲ್ ಖರೀದಿಸಿವೆ ಎಂದು ತಿಳಿಸಿದ್ದಾರೆ. 


ಆಯ್ದ ರಿಟೇಲ್ ಬಂಕ್‌ಗಳಲ್ಲಿ ಕಡಿಮೆ ಎಥೆನಾಲ್ ಮಿಶ್ರಣ ಅಥವಾ ಎಥೆನಾಲ್‌ ಮಿಶ್ರಣ ಇಲ್ಲದ ಪೆಟ್ರೋಲ್‌ ಅನ್ನು ಮಾರಾಟ ಮಾಡುವ ಯಾವುದೇ ಪ್ರಸ್ತಾಪವಿಲ್ಲ 

ಸುರೇಶ್ ಗೋಪಿ 

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಖಾತೆ ಸಚಿವ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries