HEALTH TIPS

ವೈದ್ಯ ಮನೆಯೊಳಗೆ ಮೃತಪಟ್ಟು ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ವೈದ್ಯರೊಬ್ಬರು ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಗರದ ಬಟ್ಟಂಪಾರೆಯಲ್ಲಿ ಕೃಷ್ಣ ಥಿಯೇಟರ್ ಸಮೀಪ ವಾಸಿಸುತ್ತಿದ್ದ ವರ್ಕಾಡಿ ಕೊಣಿಬೈಲು ನಿವಾಸಿ ಡಾ. ರಾಜೇಂದ್ರ ಶೆಟ್ಟಿ (73) ಮೃತಪಟ್ಟ ವ್ಯಕ್ತಿ.  ಮನೆಯ ಶೌಚಾಲಯದಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಡಾ. ರಾಜೇಂದ್ರ ಶೆಟ್ಟಿ  ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರಿಗೆ ಪೋನ್ ಕರೆ ಮಾಡಿದರೂ  ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ಮನೆಗೆ ತಲುಪಿ ನೋಡಿದಾಗ ಇವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಳ್ಳಂ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.


ಅವಿವಾಹಿತನಾದ ಡಾ. ರಾಜೇಂದ್ರ ಶೆಟ್ಟಿ  ಕಳೆದ 16 ವರ್ಷಗಳಿಂದ ಬಟ್ಟಂಪಾರೆಯ ಮನೆಯಲ್ಲಿ ವಾಸಿಸುತ್ತಿದ್ದರು. ಕಾಸರಗೋಡು ಕಿಮ್ಸ್, ಚೆಂಗಳ ಇಕೆ.ನಾಯನಾರ್ ಸಹಕಾರಿ ಆಸ್ಪತ್ರೆ ಮೊದಲಾದೆಡೆಗಳಲ್ಲಿ  ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಿಂದ ವಿಶ್ರಾಂತಿಯಲ್ಲಿದ್ದರು. ದಿ. ಸೀತಾರಾಮ ಶೆಟ್ಟಿ-ಸುಂದರಿ ಶೆಟ್ಟಿ ದಂಪತಿಯ ಪುತ್ರನಾದ ಮೃತರು ಸಹೋದರಿಯರಾದ ಮಲ್ಲಿಕಾ ಚೌಟ, ಶಕೀಲ ರೈ, ಚಂದ್ರಿಕಾ ಹೆಗ್ಡೆ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಕುಶಾಲ್‍ನಾಥ್, ಡಾ. ರವೀಂದ್ರ ಶೆಟ್ಟಿ ಈ ಹಿಂದೆ ನಿಧನರಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries