HEALTH TIPS

ದೇಶದ ಶಿಕ್ಷಣ ವ್ಯವಸ್ಥೆ ಆರ್​ಎಸ್​ಎಸ್​ ಕೈಯಲ್ಲಿದೆ: ಬಹುತೇಕ ಉಪ ಕುಲಪತಿಗಳು ಸಂಘದೊಂದಿದೆ ಸಂಬಂಧ ಹೊಂದಿದ್ದಾರೆ; ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ಗಾಂಧಿ ಗರಂ!

ನವದೆಹಲಿ: ನೀಟ್​ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ, ಜಂತರ್​-ಮಂತರ್​ನಲ್ಲಿ ನಡೆದ ಪ್ರತಿಭಟನೆ ತರುವಾಯ ಕೇಂದ್ರ ಸರ್ಕಾರ ಪರೀಕ್ಷಾ ಅಕ್ರಮಗಳನ್ನು ತಡೆಯಲು ಮಸೂದೆಯೊಂದನ್ನು ಸಿದ್ಧಪಡಿಸಿದ್ದು, ಇಂದು (ಬುಧವಾರ, ಜು.29) ಸಂಸತ್​​ನಲ್ಲಿ ತೀವ್ರ ಚರ್ಚೆ ನಡೆದಿದೆ.

ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್​ ಗಾಂಧಿ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಲ್ಲಿ ಆರ್​ಎಸ್​ಎಸ್​ ಹಿನ್ನಲೆವುಳ್ಳವರೇ ಅಧಿಕಾರದಲ್ಲಿದ್ದಾರೆ, ಶಿಕ್ಷಣ ವ್ಯವಸ್ಥೆ ಆರ್​ಎಸ್​ಎಸ್​​ ಕೈಯಲ್ಲಿದೆ ಎಂದು ಕಿಡಿಕಾರಿದ್ದಾರೆ.

ಶಿಕ್ಷಣ ವ್ಯವಸ್ಥೆ ಆರ್​ಎಸ್‌ಎಸ್​ ಕೈಯಲ್ಲಿದೆ!

ಮಸೂದೆ ಕುರಿತು ಆರಂಭವಾದ ಚರ್ಚೆಯನ್ನು ಆರ್​ಎಸ್​ಎಸ್​ ಕಡೆ ಕೊಂಡೊಯ್ದ ರಾಹುಲ್ ಗಾಂಧಿ, ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಶಿಕ್ಷಣ ಸಚಿವರಾಗಿದ್ದ, ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆಯನ್ನು ಸ್ವೀಕರಿಸಿದೆ. ಆದರೆ ಈ ರಾಜೀನಾಮೆಯಿಂದ ಏನು ಪ್ರಯೋಜನವಿಲ್ಲ, ದೇಶದ ಬಹುತೇಕ ಶಿಕ್ಷಣ ಸಂಸ್ಥೆಗಳು ಆರ್​ಎಸ್​ಎಸ್​ ಕೈಯಲ್ಲಿದೆ ಎಂದು ಹೇಳಿದ್ದಾರೆ.

ದೇಶದ ಎಲ್ಲಾ ಸ್ತರದ ಉತ್ತಮ ಶೈಕ್ಷಣಿಕ ಅಧಿಕಾರಿ ಆರ್​ಎಸ್​ಎಸ್​ ಹಿನ್ನಲೆ ಉಳ್ಳವರೇ ಆಗಿದ್ದಾರೆ. ಹಾಗೆಯೇ ಹೆಚ್ಚು ಕಡಿಮೆ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಆರ್​ಎಸ್​ಎಸ್​ ಕಾರ್ಯಕರ್ತರು ಅಥವಾ ಆರ್​ಎಸ್​ಎಸ್​ ಜೊತೆ ನಿಕಟ ಸಂಪರ್ಕ ಹೊಂದಿದವರೇ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್​ ಮಾತು ಅಸಂವಿಧಾನಿಕ!

ಚರ್ಚೆ ಆರಂಭಿಸಿದ ರಾಹುಲ್​ ಗಾಂಧಿ, ವಿದ್ಯಾರ್ಥಿಗಳೇ, ಮೂರ್ಖರೇ ಹಾಗೂ ಅಂಧಭಕ್ತರೇ ಎಂದು ಹೇಳುವ ಮೂಲಕ ಮಾತನ್ನು ಪ್ರಾರಂಭಿಸಿದರು. ಈ ಹೇಳಿಕೆ ಆಡಳಿತ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್​ ರಿಜುಜು, ರಾಹುಲ್ ಗಾಂಧಿ ಉಪಯೋಗಿಸಿದ ಪದಗಳು ಅಸಾಂವಿಧಾನಿಕವಾಗಿದೆ, ನಾವು ಈ ವಿಷಯದ ಕುರಿತು ಮುಕ್ತ ಚರ್ಚೆಗೆ ನಿರ್ಧರಿಸಿದ್ದು, ವಿರೋಧ ಪಕ್ಷದವರು ಮಾತನಾಡುವಾಗ ಅಡ್ಡಿ ಪಡಿಸುವುದಿಲ್ಲ. ಅದರೆ ಅವರಿಗೆ ಅಸಂವಿಧಾನಿಕ ಪದಗಳನ್ನು ಬಳಸಲು ಯಾವುದೇ ಅವಕಾಶವಿಲ್ಲ, ಇದನ್ನು ನೀವು ತಡೆಯಬೇಕೆಂದು ಸ್ಪೀಕರ್​ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries