HEALTH TIPS

ಗಾಳಿ ಮಳೆ: ಕುಂಬಳೆಯಲ್ಲಿ ಎರಡು ಮನೆಗಳ ಮೇಲೆ ಮರಗಳು ಬಿದ್ದು ಹಾನಿ; ಕಾಞಂಗಾಡ್‍ನಲ್ಲಿ ಹಾರಿಹೋದ ಶಾಲೆಯ ಮೇಲ್ಛಾವಣಿ

ಕುಂಬಳೆ: ಸೋಮವಾರ ಸಂಜೆ ಬೀಸಿದ ಬಲವಾದ ಗಾಳಿ ಮಳೆಗೆ ವಿವಿಧೆಡೆಗಳಲ್ಲಿ ವ್ಯಾಪಕ ನಾಶನಷ್ಟ ಉಂಟಾಗಿದೆ. ಕುಂಬಳೆಯಲ್ಲಿ  ಎರಡು ಮನೆಗಳ  ಮೇಲೆ ಮರಗಳು ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಕುಂಬಳೆ ಪಂಚಾಯತಿಯ 12ನೇ ವಾರ್ಡ್ ಕೋಟೆಕ್ಕಾರ್‍ನಲ್ಲಿ ರಾಧಾಕೃಷ್ಣ ಪೂಜಾರಿ ಎಂಬವರ ಹೆಂಚಿನ ಮನೆಗೆ ತೆಂಗಿನ ಮರ ಬುಡದಿಂದ ಮುರಿದು ಬಿದ್ದಿದೆ.  24ನೇ ವಾರ್ಡ್ ಶೇಡಿಕಾವಿನಲ್ಲಿ  ಮುತ್ತುಕೋಯ ತಂಙಳ್ ಎಂಬವರ ಹೆಂಚಿನ ಮನೆ ಮೇಲೆ ಸಮೀಪದ ಹಿತ್ತಿಲಿನ  ಮರದ ರೆಂಬೆ ಮುರಿದು ಬಿದ್ದಿದೆ. 


ಈ ಎರಡೂ ಘಟನೆಗಳಿಂದ ಮನೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಘಟನೆ ವೇಳೆ ಮನೆಯಲ್ಲಿದ್ದವರು ಹೊರಗೆ ಓಡಿದುದರಿಂದ ಅಪಾಯ ತಪ್ಪಿಹೋಗಿದೆ. ಘಟನೆಯಲ್ಲಿ ಮನೆಗಳ ಪಕ್ಕಾಸು ಮೊದಲಾದವು ಮುರಿದು ಬಿದ್ದಿದ್ದು ಇದರಿಂದ ಕುಟುಂಬಗಳಿಗೆ ವಾಸಿಸಲು ಸೌಕರ್ಯವಿಲ್ಲದೆ ಸಮಸ್ಯೆ ಎದುರಾಗಿದೆ.

ಇದೇ ರೀತಿ  ಕಿನಾನೂರು ಕರಿಂದಳ ಪಂಚಾಯತಿಯ ನಾಂದಿಯಡ್ಕ ಎಂಬಲ್ಲಿ  ಹೆಂಚು ಹಾಸಿದ ಮನೆ ಮೇಲೆ ಮರ ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಇಲ್ಲಿನ ಜಾನಕಿ ಎಂಬವರ ಮನೆಗೆ ಮರ ಬಿದ್ದಿದ್ದು, ಈ ವೇಳೆ ಮನೆಯೊಳಗಿದ್ದ  ಜಾನಕಿಯವರ ತಾಯಿ ಕೆ. ಮಾಣಿಕ್ಕ (90) ಗಾಯಗೊಂಡಿದ್ದಾರೆ. ಇತ ರರು ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಈ ಘಟನೆ ಸಂಭವಿಸಿದೆ.

ಕಾಞಂಗಾಡ್ ಸೌತ್ ಸರ್ಕಾರಿ ವೊಕೇಶನಲ್ ಹೈಯರ್  ಸೆಕೆಂಡರಿ ಶಾಲೆಯ ಮೇಲ್ಛಾವಣಿ ಹಾನಿಗೊಂಡಿದೆ. 8 ತರಗತಿ ಕೊಠಡಿಗಳ ಮೇಲೆ ಹಾಸಿದ ರೂಫಿಂಗ್ ಶೀಟ್‍ಗಳು ಗಾಳಿಗೆ ಹಾರಿ ಸಮೀಪದ ಹಿತ್ತಿಲಿನಲ್ಲಿ ಬಿದ್ದಿವೆ.  ಅಪಾಯಕಾರಿ ರೀತಿಯಲ್ಲಿ ಮೇಲ್ಛಾವ ಣಿಯ ಇತರ ಭಾಗಗಳು ಸಿಲುಕಿಕೊಂ ಡಿರುವುದರಿಂದ ಸಮೀಪದ ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಮಳೆ ಜೊತೆಗೆ ಬಲವಾದ ಗಾಳಿಯೂ ಬೀಸುತ್ತಿದ್ದು ಇದರಿಂದ ಹಲವೆಡೆಗಳಲ್ಲಿ  ವ್ಯಾಪಕ ನಾಶನಷ್ಟ ಉಂಟಾಗಿರುವುದಾಗಿ ವರದಿಯಾಗಿದೆ. ರಬ್ಬರ್ ಮರಗಳ ಸಹಿತ  ಹಲವು ಮರಗಳು ಮುರಿದು ಬಿದ್ದಿದ್ದು ಕೃಷಿಗೂ ವ್ಯಾಪಕ ನಾಶನಷ್ಟ ಉಂಟಾಗಿರುವುದಾಗಿ  ದೂರಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries