ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿಯ ಒಂಬತ್ತನೇ ವಾರ್ಡು ಕಂಗಿಲ ಅಂಗನವಾಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರವು ಬದಿಯಡ್ಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಜರಗಿತು. ವಾರ್ಡು ಸದಸ್ಯ ಮಧುಸೂದನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ತಪಾಸಣೆ ಅತೀ ಅಗತ್ಯ. ನಿಯಮಿತ ದಿನಗಳಲ್ಲಿ ನಮ್ಮ ರಕ್ತದೋತ್ತಡ, ಸಕ್ಕರೆ ಮಟ್ಟ, ಯಚ್ ಬಿ, ಕಣ್ಣು ಮೊದಲಾದವರುಗಳ ಪರಿಶೋಧನೆಯಿಂದ ರೋಗ ಬಾರದಂತೆ ತಡೆಗಟ್ಟಲು ಸಾಧ್ಯವಿದೆ ಎಂದರು. ಜತೆಗೆ ಮಳೆಗಾಲ ರೋಗದ ಕುರಿತು ಮಾಹಿತಿಯನ್ನು ನೀಡಲಾಯಿತು. ಆಶಾ ಕಾರ್ಯಕರ್ತೆ ಲೀಲಾವತಿ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಪುಷ್ಪ ವಂದಿಸಿದರು.

.jpg)
