ಕಾಸರಗೋಡು: ಹೊಸ ತಲೆಮಾರನ್ನು ಸಮಾಜದೊಂದಿಗೆ ಸಂಪರ್ಕಿಸುವಲ್ಲಿ ಗ್ರಂಥಾಲಯ ಚಳವಳಿ ಮಹತ್ವದ ಜವಾಬ್ದಾರಿ ಹೊಂದಿರುವುದಾಗಿ ಕೇರಳಂ ರಾಜ್ಯ ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ತಿಳಿಸಿದ್ದಾರೆ.
ಅವರು ಕಾಞಂಗಾಡಿನ ಮೆಲಂಕೋಟ್‍ನಲ್ಲಿ ಕಾಸರಗೋಡು ಜಿಲ್ಲಾ ಗ್ರಂಥಾಲಯ ಮಂಡಳಿಗಾಗಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಪ್ರಧಾನ ಕಚೇರಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕೇರಳದ ನವೋದಯ ಚಳುವಳಿ, ಸಾಮಾಜಿಕ ಪ್ರಗತಿ ಮತ್ತು ಸಾಕ್ಷರತಾ ಆಂದೋಲನದ ಬೆಳವಣಿಗೆಯಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸಿವೆ. ರಾಜ್ಯದ ಸಾಮಾಜಿಕ ಪ್ರಗತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಗ್ರಂಥಾಲಯ ಚಳುವಳಿಯು ಯುವಜನತೆಯನ್ನು ತನ್ನತ್ತ ಸೆಳೆದುಕೊಳ್ಳಬೇಕು, ಜತೆಗೆ ಮಾದಕವಸ್ತುಗಳ ಹರಡುವಿಕೆಯನ್ನು ತಡೆಗಟ್ಟುವ ಹಾಗೂ ಯುವಜನರನ್ನು ಕ್ರೀಡೆ, ಕಲೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿರಬೇಕು ಎಂದು ಸಚಿವರು ತಿಳಿಸಿದರು.
ಹೊಸದುರ್ಗ ತಾಲೂಕು ಗ್ರಂಥಾಲಯ ಮಂಡಳಿಯ ಕಚೇರಿಯನ್ನು ಕೇರಳ ರಾಜ್ಯ ಗ್ರಂಥಾಲಯ ಮಂಡಳಿಯ ಕಾರ್ಯದರ್ಶಿ ವಿ.ಕೆ. ಮಧು ಹಾಗೂ ಉತ್ತರ ಕೇರಳದಲ್ಲಿ ಗ್ರಂಥಾಲಯ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರಾದ ಕೆ.ಕೆ. ನಾಯರ್ ಅವರ ಸ್ಮರಣಾರ್ಥ ಸ್ಥಾಪಿಸಲಾದ 'ವಿದ್ವಾನ್ ಕೆ.ಕೆ. ನಾಯರ್ ಹೊಸದುರ್ಗ ತಾಲೂಕು ಗ್ರಂಥಾಲಯ'ವನ್ನು ರಾಜ್ಯ ಗ್ರಂಥಾಲಯ ಮಂಡಳಿಯ ಅಧ್ಯಕ್ಷ ಡಾ. ಧರ್ಮರಾಜ್ ಅಡಾಟ್ ಉದ್ಘಾಟಿಸಿದರು.
ಶಾಸಕ ಗೋವಿಂದನ್ ಪಳ್ಳಿಕ್ಕಪ್ಪಿಲ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಕೆ.ಸುಜಾತಾ, ಗ್ರಂಥಲೋಕಂ ಮುಖ್ಯ ಸಂಪಾದಕ ಪಿ.ವಿ.ಕೆ. ಪನಾಯಾಲ್, ರಾಜ್ಯ ಗ್ರಂಥಾಲಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ವಕೀಲ ಪಿ.ಅಪ್ಪುಕುಟ್ಟನ್, ಜಿಲ್ಲಾ ಗ್ರಂಥಾಲಯ ಪರಿಷತ್ ಮಾಜಿ ಅಧ್ಯಕ್ಷ ಕೆ.ವಿ. ಕುಞÂರಾಮನ್, ಹೊಸದುರ್ಗ ತಾಲೂಕು ಕಾರ್ಯದರ್ಶಿ ಪಿ.ವೇಣುಗೋಪಾಲನ್, ತಾಲೂಕು ಅಧ್ಯಕ್ಷ ಸುನೀಲ್ ಪಟ್ಟೆನವರ, ಹಾಗೂ ಕೆ.ಕೆ. ನಾಯರ್ ಅವರ ಪತ್ನಿ ಯು.ಪಿ. ವಿಮಲಾ ಉಪಸ್ಥಿತರಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್ ಸ್ವಾಗತಿಸಿದರು. ಜಿಲ್ಲಾ ಗ್ರಂಥಾಲಯ ಮಂಡಳಿಯ ಅಧ್ಯಕ್ಷ ಪಿ. ದಿಲೀಪ್ ಕುಮಾರ್ ವಂದಿಸಿದರು.



