ಕಾಸರಗೋಡು: ಆಲ್ ಕೇರಳ ಫೆÇೀಟೋ ಗ್ರಾಫರ್ಸ್ ಅಸೊಸಿಯೇಶನ್ (ಎಕೆಪಿಎ)ನ ವೆಸ್ಟ್ ಯೂನಿಟ್ ಕಾಸರಗೋಡು ವತಿಯಿಂದ ಮೃದಂಗ ಮಾಂತ್ರಿಕ, ಶತಾಯುಷಿ ವಿದ್ವಾನ್ ಕೆ.ಬಾಬು ರೈ ಅವರಿಗೆ ಗೌರವಾರ್ಪಣೆ ಸಮಾರಂಭ ಸೂರ್ಲಿನ ಅವರ ನಿವಾಸದಲ್ಲಿ ಜರುಗಿತು. ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಗೌರವಿಸಿದರು. *ಪತ್ರಕರ್ತ ವೀಜಿ.ಕಾಸರಗೋಡು ಅಭಿನಂದನೆ ಭಾಷಣ ಮಾಡಿದರು.
ವಿದ್ವಾನ್ ಕೆ.ಶ್ರೀಧರ ರೈ ಕಾಸರಗೋಡು, ಕೆ.ನಾರಾಯಣ ರೈ ದಂಪತಿ, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ, ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಗಣೇಶ ರೈ, ಯೂನಿಟ್ ಸಮಿತಿ ಸದಸ್ಯರಾದ ಸದಸ್ಯರಾದ ರತೀಶ್ ರಾಮು, ಮಹೇಶ್ ಪರಕ್ಕಿಲ ಉಪಸ್ಥಿತರಿದ್ದರು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾಲಿನಿ ರಾಜೇಂದ್ರ ವಂದಿಸಿದರು


