HEALTH TIPS

ಕಾಸರಗೋಡು ಪಾರೆಕಟ್ಟೆಯಲ್ಲಿ ಸುಸಜ್ಜಿತ ಗೋ-ಕುಟೀರ-ದಾನಿಗಳ ಸಹಕಾರ ಯಾಚನೆ

ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಅಂಗವಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ "ಕಾಸರಗೋಡು ಗೋ-ಕುಟೀರ"ದ  ಕಾಮಗಾರಿಗೆ ಗೋ- ಭಕ್ತರು, ಗೋ -ಪೆÇೀಷಕರು, ದಾನಿಗಳಿಂದ ಆರ್ಥಿಕ ಸಹಾಯ,ಸಹಕಾರ ಪೆÇ್ರೀತ್ಸಾಹವನ್ನು ನೀಡುವಂತೆ ಮನವಿ ಮಾಡಲಾಗಿದೆ.  


ದೇಸಿ ಗೋವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋಕುಟೀರ ನಿರ್ಮಾಣವಾಗುತ್ತಿದ್ದು,   ದೈವಾರ್ಷಿಕ ಕಾರ್ಯ ಯೋಜನೆಯನ್ನು ಕೈಗೊಳ್ಳಲಾಗಿದೆ. ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಕಾಸರಗೋಡು ಕನ್ನಡ ಗ್ರಾಮಕ್ಕೆ ಆಗಮಿಸಿ ಕಾಸರಗೋಡು ಗೋ-ಕುಟೀರದಲ್ಲಿ ಗೋವುಗಳಿಗೆ ಗೋ-ಗ್ರಾಸ ನೀಡಿ, ಗೋ- ಆರತಿಯನ್ನು ಬೆಳಗಿಸಿ, ಗೋ-ಸಂಕೀರ್ತನೆಯನ್ನು ಹಾಡಿ, ಗೋ-ಕುಟೀರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವ ಅವಕಾಶ ಕಲ್ಪಿಸಲಾಗುವುದು. ಜತೆಗೆ  ಗೋ - ಕುಟೀರದ ವಠಾರದಲ್ಲಿನಿರ್ಮಾಣವಾಗಲಿರುವ "ಕಾಮಧೇನು- ಕಲ್ಪವೃಕ್ಷ ಗೋ- ವಿಶ್ರಾಂತಿ ಗೃಹ "ದಲ್ಲಿ ಗೋ- ಭಕ್ತರು, ಗೋ-ಪೆÇೀಷಕರು, ದಾನಿಗಳಿಗೆ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಘುವುದು. 

 ಕಾಸರಗೋಡು ಗೋ-ಕುಟೀರದಲ್ಲಿ ವಿವಿಧ ಸಂಘ ಸಂಸ್ಥೆಗಳು, ಬ್ಯಾಂಕ್, ಉದ್ಯಮ, ಕೈಗಾರಿಕಾ ಸಂಸ್ಥೆಗಳು, ದೇವಸ್ಥಾನ,ಮಠ, ಮಂದಿರ, ವಿವಿಧ ಟ್ರಸ್ಟ್ ಗಳ ನೆರವಿನ ಪ್ರಾಯೋಜಕತ್ವದಡಿಯಲ್ಲಿ ಸಾವಯವ ಕೃಷಿ,ಗ್ರಾಮೀಣ ಸ್ವ-ಉದ್ಯೋಗ ಕೇಂದ್ರ, ವಿದ್ಯಾರ್ಥಿಗಳು,ಯುವಜನರು, ಮಹಿಳೆಯರು, ಮಹಿಳಾ ಉದ್ಯೋಗಿಗಳಿಗಾಗಿ ಹೊಲಿಗೆ, ವಸ್ತ್ರ,ವಿನ್ಯಾಸ, ಡಿಸೈನಿಂಗ್ ಕೇಂದ್ರ,ಕಂಪ್ಯೂಟರ್, ಡಿಜಿಟಲ್ ಮಾಧ್ಯಮ ಕೇಂದ್ರ, ಕಲಾ ಗ್ಯಾಲರಿ, ಜಾನಪದ ವಸ್ತು ಸಂಗ್ರಹಾಲಯ, ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್, ಗ್ರಂಥಾಲಯ,ಸಾಹಿತ್ಯ ಕುಟೀರ, ಭಜನಾ ಸಂಕೀರ್ತನಾ  ಕುಟೀರ,ನಮ್ಮ ಮನೆ - ವಿಶ್ರಾಂತಿ ಗ್ರಹ (ರೆಸ್ಟ್ ಹೌಸ್) ವನ್ನು ನಿರ್ಮಿಸಲು ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೋಕುಟೀರ ಸಮಿತಿ ಪ್ರಕರಣೆ ತಿಳಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries