ಬದಿಯಡ್ಕ: ನೀರ್ಚಾಲು ಮಾನ್ಯ ರಸ್ತೆಯ ಪುದುಕೋಳಿ ಸೇತುವೆ ಬಳಿ ಕಳೆದ ಹಲವು ಸಮಯಗಳಿಂದ ನಿರಂತರವಾಗಿ ಶೌಚಾಲಯ ತ್ಯಾಜ್ಯ ಸಹಿತ ಕಸ ಎಸೆತ ಹಾಗೂ ಇತರ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದರ ವಿರುದ್ಧ ಸ್ಥಳೀಯರು ವಾರ್ಡ್ ಸದಸ್ಯೆಯ ನೇತೃತ್ವದಲ್ಲಿ ಪ್ರಬಲ ಕ್ರಮಕ್ಕೆ ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಭಾನುವಾರ ಸಂಜೆ ಪುದುಕೋಳಿ ಈಶ್ವರ ಭಟ್ ಅವರ ನಿವಾಸದಲ್ಲಿ ಸೇರಿದ ತುರ್ತು ಸಭೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಶಾಂತ ಪರಿಸರವೊಂದನ್ನು ಬಲಿಕೊಡುವ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದ್ದು, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಪೋಲೀಸ್ ದೂರು ದಾಖಲಿಸುವಿಕೆ ಹಾಗೂ ನಾಗರಿಕರ ನೇತೃತ್ವದಲ್ಲಿ ರಾತ್ರಿ ಗಸ್ತು ಮೊದಲಾದ ಕ್ರಮಗಳಿಗೆ ರೂಪು ನೀಡಲಾಯಿತು.
ವಾರ್ಡ್ ಸದಸ್ಯೆ ರಜನಿ ಸಂದೀಪ್ ಉಪಸ್ಥಿತರಿದ್ದು ಸಲಹೆ ನೀಡಿದರು. ಸುಮ ಈಶ್ವರ ಭಟ್, ಲಕ್ಷ್ಮೀ ಐ, ಜಯೇಶ್ ಟಿ.ಎನ್., ಕೊರಗಪ್ಪ ನಾಯ್ಕ್, ಕೃಷ್ಣ ನಾಯ್ಕ್, ಮುರಳೀಕೃಷ್ಣ ಪಿ., ಶಂಕರನಾರಾಯಣ ಭಟ್, ಸುಲೋಚನ, ಕಾವೇರಿ, ಗಂಗಾಧರ ಕೆ., ವಾಮನ ನಾಯ್ಕ್, ವೆಂಕಟೇಶ ಸಿ.ಎಚ್, ಸರೋಜಿನಿ ಸಿ.ಎಚ್, ಈಶ್ವರಿ ಎಂ ಮೊದಲಾದವರು ಉಪಸ್ಥಿತರಿದ್ದರು. ಈಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ ಸ್ವಾಗತಿಸಿದರು.

-side.jpg)
-side.jpg)
