ಕಾಸರಗೋಡು: ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯು "ಹೊಸ ಯುಗದ ಕನಸುಗಳಿಗಾಗಿ" ಎಂಬ ಧ್ಯೇಯದೊಂದಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ಉನ್ನತ ಪ್ರೌಢಶಾಲಾ ಪ್ರವೇಶೋತ್ಸವ ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಗ್ರತೆ, ಬದ್ಧತೆ ಮತ್ತು ಸ್ವಾವಲಂಬನೆಯ ಮನೋಭಾವವನ್ನು ಬೆಳೆಸುವುದರೊಂದಿಗೆ
ದೇಶದ ಘನತೆಯನ್ನು ಎತ್ತಿಹಿಡಿಯುವ ಸಾಮಥ್ರ್ಯವುಳ್ಳ ಹೊಸ ಪೀಳಿಗೆಯನ್ನು ತಯಾರಿಸುವುದು ಶಿಕ್ಷಣದ ಅಂತಿಮ ಗುರಿಯಾಗಿದೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಆರ್‍ಡಿಡಿ ಎಂ.ಕೆ. ವಿನೋದ್ ಕುಮಾರ್ ಪ್ರವೇಶೋತ್ಸವ ಸಂದೇಶ ನೀಡಿದರು. ನಗರಸಭಾ ವಾರ್ಡ್ ಕೌನ್ಸಿಲರ್ ಪಿ.ವಿ. ಚಂದ್ರನ್, ಎಸ್‍ಎಂಸಿ ಅಧ್ಯಕ್ಷ ಸಿ.ಕೆ. ಅಶ್ರಫ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕೆ. ರಶೀದ್, ಪಿಟಿಎ ಅಧ್ಯಕ್ಷೆ ಫಾತಿಮತ್ ನೌಶಿಬಾ, ಪ್ರಭಾರ ಮುಖ್ಯ ಶಿಕ್ಷಕಿ ಪಿ. ಸಂಗೀತಾ, ಹಿರಿಯ ಮಾಧ್ಯಮಿಕ ವಿಭಾಗದ ಹಿರಿಯ ಸಹಾಯಕಿ ಕೆ.ವಿ. ಸಜಿತಾ, ಪ್ರೌಢಶಾಲಾ ವಿಭಾಗದ ಹಿರಿಯ ಸಹಾಯಕ ರಾಜೇಶ್ ಒಲ್ನಡಿಯನ್, ಹಿರಿಯ ಮಾಧ್ಯಮಿಕ ವಿಭಾಗದ ಸಿಬ್ಬಂದಿ ಕಾರ್ಯದರ್ಶಿ ಎನ್. ಸದಾಶಿವನ್, ಪ್ರೌಢಶಾಲಾ ವಿಭಾಗದ ಸಿಬ್ಬಂದಿ ಕಾರ್ಯದರ್ಶಿ ಸಿ.ಕೆ. ರಮಿಯಾ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಂ. ಇಕ್ಬಾಲ್ ಹಾಗೂ ಕಾರ್ಯಕ್ರಮ ಸಮಿತಿ ಸಂಚಾಲಕ ಎ. ಸತೀಶನ್ ಉಪಸ್ಥಿತರಿದ್ದರು.
ಅಧ್ಯಕ್ಷ ಪಿ. ಗಂಗಾಧರನ್ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲ ಡಾ. ಎ.ವಿ. ಸುರೇಶ್ ಬಾಬು ವಂದಿಸಿದರು. ಈ ಸಂದರ್ಭ ಶಶಾಲೆಗೆ ಹೊಸದಾಗಿ ಪ್ರವೇಶ ಪಡೆದ ಪ್ಲಸ್ ಒನ್ ತರಗತಿ ವಿದ್ಯಾರ್ಥಿಗಳ ಪೆÇೀಷಕರಿಗೆ ವಿದ್ಯಾರ್ಥಿಗಳ ವೃತ್ತಿ ಅಭಿವೃದ್ಧಿಯಲ್ಲಿ ಪೆÇೀಷಕರ ಪಾತ್ರ ಎಂಬ ವಿಷಯ ಕೇಂದ್ರೀಕರಿಸಿ "ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವುದು" ಎಂಬ ಜಾಗೃತಿ ತರಗತಿ ನಡೆಸಲಾಯಿತು.



