ಅಯೋಧ್ಯೆ: ಶ್ರೀ ರಾಮಮಂದಿರ ಟ್ರಸ್ಟ್‌ನ ಮೊದಲ ಕಾರ್ಯದರ್ಶಿಯಾಗಿ ಆರ್‌ಎಸ್‌ಎಸ್ ನಾಯಕ ಜಗದೀಶ್ ಆಫ್ಲೆ ಅವರು ನೇಮಕವಾಗುವ ಸಾಧ್ಯತೆಯಿದೆ.
'ರಾಮಮಂದಿರಕ್ಕೆ ಸಂಬಂಧಿಸಿದ ಹೊಸ ನೇಮಕಾತಿಯ ಭಾಗವಾಗಿ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಲಾಗುತ್ತಿದೆ. ಸೆಪ್ಟೆಂಬರ್ 2ರಂದು ನಡೆಯಲಿರುವ ಟ್ರಸ್ಟ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನೇಮಕಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ' ಎಂದು ದೇಗುಲದ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಮೂಲದ ಆಫ್ಲೆ ಅವರು ರಾಮಮಂದಿರ ನಿರ್ಮಾಣ ಯೋಜನೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು.

