ಟೆಹರಾನ್: ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಎರಡು ಯುದ್ಧಗಳಲ್ಲಿ ಹತರಾದ ಎಲ್ಲಾ ಹುತಾತ್ಮರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ.
ದೇಶದ ಜನರನ್ನುದ್ದೇಶಿಸಿ ಲಿಖಿತ ಸಂದೇಶವೊಂದನ್ನು ಹಂಚಿಕೊಂಡಿರುವ ಮೊಜ್ತಬಾ, 'ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಇಡೀ ರಾಷ್ಟ್ರದ ಬೇಡಿಕೆಯಾಗಿದ್ದು, ಅದು ಖಂಡಿತವಾಗಿಯೂ ನಡೆದೇ ತೀರುತ್ತದೆ' ಎಂದು ಹೇಳಿದ್ದಾರೆ.
ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೂ ಮುಂಚಿನ ಅಂತಿಮಯಾತ್ರೆ ಅವರ ತವರು, ಶಿಯಾ ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಈಶಾನ್ಯ ಇರಾನ್‌ನ ಮಶಾದ್ ಪಟ್ಟಣದಲ್ಲಿ ಭಾರಿ ಜನಸ್ತೋಮದ ನಡುವೆ ನಡೆದಿತ್ತು.
ಖಮೇನಿ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ 6 ದಿನಗಳ ವಿಧಿ ವಿಧಾನಗಳು ಜುಲೈ 4ರಿಂದ 9ರವರೆಗೆ ನಡೆದಿದ್ದವು.
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಆರಂಭಿಸಿದ ಮೊದಲ ದಿನವಾದ ಫೆಬ್ರುವರಿ 28ರಂದು ನಡೆದ ದಾಳಿಯಲ್ಲಿ ಅಲಿ ಖಮೇನಿ ಅವರ ಹತ್ಯೆಯಾಗಿತ್ತು. ಅವರಿಗೆ 86 ವರ್ಷವಾಗಿತ್ತು.
ಮೊಜ್ತಾಬಾ ಖಮೇನಿ ಅವರ ಪತ್ನಿ, ಮೊಮ್ಮಗಳು, ಅಳಿಯ, ಮಗಳೂ ಸಾವಿಗೀಡಾಗಿದ್ದರು. ಇವನ್ನು ಖಮೇನಿ ಅವರ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ.
ಶಿಯಾ ಮುಸ್ಲಿಂ ನಾಯಕ ಇಮಾಮ್ ರೆಜಾ ಅವರ ಸಮಾಧಿ ಸ್ಥಳದಲ್ಲೇ ಖಮೇನಿ ಅವರನ್ನು ಸಮಾಧಿ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

