ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿ ಬಲಿಪಗುರಿಯಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರನ್ನುಬಂಧಿಸಿದ್ದಾರೆ. ತಲಪ್ಪಾಡಿ ದೇವಿಪುರದ ಮಹೇಶ್ ಶೆಟ್ಟಿ, ಮಂಜೇಶ್ವರ ಕಡಂಬಾರ್ ನಿವಾಸಿ ಮನೋಹರ್, ಬಂಟ್ವಾಳದ ವಿನ್ಸೆಂಟ್ ಡಿಸೋಜಾ, ಬಂಟ್ವಾಳ ಬಿ ಮೂಡದ ಇರ್ಫಾನ್, ಕಡಂಬಾರಿನ ಕಿರಣ್ ಕುಮಾರ್ ಬಂಧಿತರು. ಉಳಿದವರು ಓಡಿ ಪರಾರಿಯಾಗಿದ್ದಾರೆ. ಬಂಧಿತರಿಂದ ಒಂದು ಅಂಕದ ಕೋಳಿ ಹಾಗೂ ಜೂಜಿಗೆ ಬಳಸಿದ್ದರೆನ್ನಲಾದ 14 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.ಎಸ್.ಐ ವಿಷ್ಣು ಎಸ್ ನಾಯರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

