ಮುಳ್ಳೇರಿಯ: ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮುಳ್ಳೇರಿಯ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ದೀಕ್ಷಾ (17) ಮೃತಪಟ್ಟಿದ್ದಾಳೆ. ಮುಳ್ಳೇರಿಯ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಡುಗೆ ಕಾರ್ಮಿಕರಾಗಿರುವ ಬಿ. ಕೃಷ್ಣ-ರಾಧಾಮಣಿ ದಂಪತಿ ಪುತ್ರಿಯಾಗಿರುವ ದೀಕ್ಷಾ ಅವರಿಗೆ ಜೂ.23ರಂದು ಮುಳ್ಳೇರಿಯ ಗಜಾನನ ಎಲ್‍ಪಿ ಶಾಲೆ ಬಳಿ ಕಂಬಳ ವಿವೇಕಾನಂದ ನಗರದ ಮನೆ ಬಳಿ ಕಾರು ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತದೇಹ ಬುಧವಾರ ಬೆಳಗ್ಗೆ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಅಂತ್ಯಸಂಸ್ಕಾರ ನಡೆಸಲಾಯಿತು.
ನೆರೆಮನೆ ನಿವಾಸಿ ಶ್ರೇಯಾನ್ (4) ಎಂಬ ಮಗುವನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವ ಮಧ್ಯೆ ಅತಿಯಾದ ವೇಗದಿಂದ ಆಗಮಿಸಿದ ಕಾರು ಡಿಕ್ಕಿಯಾಗಿ ಇಬ್ಬರಿಗೂ ಗಾಯವುಂಟಾಗಿತ್ತು. ಗಂಭೀರ ಗಾಯಗೊಂಡ ಶ್ರೇಯಾನ್ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾನೆ.


