HEALTH TIPS

ವಡಕ್ಕಂಚೇರಿ ಲೈಫ್ ಮಿಷನ್ ಭ್ರಷ್ಟಾಚಾರ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಸೇರಿದಂತೆ ಆರು ಆರೋಪಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ

ತ್ರಿಶೂರ್: ವಡಕ್ಕಂಚೇರಿ ಲೈಫ್ ಮಿಷನ್ ಫ್ಲಾಟ್ ನಿರ್ಮಾಣ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಸ್ವಪ್ನಾ ಸುರೇಶ್ ಸೇರಿದಂತೆ ಆರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ಒಪ್ಪಂದದಡಿಯಲ್ಲಿ ಪಡೆದ ಮೊತ್ತದಿಂದ 4 ಕೋಟಿ ರೂ.ಗಳನ್ನು ಕಮಿಷನ್ ಆಗಿ ದುರುಪಯೋಗಪಡಿಸಿಕೊಂಡಿರುವುದನ್ನು ಸಿಬಿಐ ಪತ್ತೆಮಾಡಿದಿದೆ. 


ಕೊಚ್ಚಿ ಮೂಲದ ಸಂತೋಷ್ ಈಪನ್ ಒಡೆತನದ ಯುನಿಟಾಕ್ ಬಿಲ್ಡರ್ಸ್ ಮತ್ತು ಜೈನ್ ವೆಂಚರ್ಸ್ ಕಂಪನಿಗೆ ಪ್ರವಾಹ ಪೀಡಿತರಿಗಾಗಿ ಲೈಫ್ ಮಿಷನ್ ಯೋಜನೆಯ ಭಾಗವಾಗಿ ವಡಕ್ಕಂಚೇರಿಯಲ್ಲಿ ಫ್ಲಾಟ್ ಮತ್ತು ಆಸ್ಪತ್ರೆ ಸಂಕೀರ್ಣವನ್ನು ನಿರ್ಮಿಸುವ ಒಪ್ಪಂದವನ್ನು ನೀಡುವಲ್ಲಿ ಪ್ರಮುಖ ಅಕ್ರಮಗಳು ನಡೆದಿವೆ ಎಂದು ತನಿಖೆಯಲ್ಲಿ ಕಂಡುಬಂದಿದೆ.

ಯುನಿಟಾಕ್ ಎಂಡಿ ಸಂತೋಷ್ ಈಪನ್ ಈ ಪ್ರಕರಣದಲ್ಲಿ ಮೊದಲ ಆರೋಪಿ. ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸಂದೀಪ್ ನಾಯರ್, ಸ್ವಪ್ನಾ ಸುರೇಶ್ ಮತ್ತು ಯುಎಇ ಕಾನ್ಸುಲೇಟ್ ನ ಮಾಜಿ ಪಿಆರ್ ಒ ಪಿ.ಎಸ್. ಸರಿತ್ ಆರೋಪ ಪಟ್ಟಿಯಲ್ಲಿ ಇತರರು.

ಪ್ರವಾಹ ಸಂತ್ರಸ್ತರಿಗೆ ಫ್ಲಾಟ್‍ಗಳ ನಿರ್ಮಾಣಕ್ಕಾಗಿ ಯುಎಇ ರೆಡ್ ಕ್ರೆಸೆಂಟ್ ಜೊತೆ ಸಹಿ ಹಾಕಿದ ಒಪ್ಪಂದದ ಪ್ರಕಾರ 21 ಕೋಟಿ ರೂ.ಗಳನ್ನು ಪಡೆಯಲಾಗಿದೆ. ಕಾಂಗ್ರೆಸ್ ನ ಮಾಜಿ ಶಾಸಕ ಅನಿಲ್ ಅಕ್ಕರ ದೂರುದಾರರಾಗಿದ್ದರು

ಮಾಜಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ. ಶಿವಶಂಕರ್ ಮತ್ತು ಲೈಫ್ ಮಿಷನ್ ನ ಸಿಇಒ ಆಗಿದ್ದ ಯುವಿ ಜೋಸ್ ವಿರುದ್ಧ ತನಿಖೆ ನಡೆಯುತ್ತಿದೆ. ಶಿವಶಂಕರ್ ಈ ಪ್ರಕರಣದಲ್ಲಿ ಏಳನೇ ಆರೋಪಿ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries