ಕಾಸರಗೋಡು: ನೀಲೇಶ್ವರದ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು, ಫಾರ್ಮಾಸಿಸ್ಟ್, ನಸಿರ್ಂಗ್ ಆಫೀಸರ್ ಹುದ್ದೆಗಳಿಗೆ ದಿನವೇತನ ಆಧಾರದನ್ವಯ ತಾತ್ಕಾಲಿಕ ನೇಮಕಾತಿಗಾಗಿ ಜುಲೈ 20 ರಂದು ಸಂದರ್ಶನ ನಡೆಯಲಿದೆ. ವೈದ್ಯ ಹುದ್ದೆಯ ಸಂದರ್ಶನ ಜುಲೈ 20 ರಂದು ಬೆಳಗ್ಗೆ 11.30ಕ್ಕೆ, ಫಾರ್ಮಾಸಿಸ್ಟ್ ಮತ್ತು ನಸಿರ್ಂಗ್ ಅಧಿಕಾರಿ ಹುದ್ದೆಗಳ ಸಂದರ್ಶನಗಳು ಕ್ರಮವಾಗಿ ಮಧ್ಯಾಹ್ನ 12 ಮತ್ತು 12.30 ಕ್ಕೆ ನಡೆಯಲಿವೆ.
ವೈದ್ಯ ನೇಮಕಾತಿಗೆ ಎಂ.ಬಿ.ಬಿ.ಎಸ್, ಟಿ.ಸಿ.ಎಮ್.ಸಿ ಪರ್ಮನೆಂಟ್ ರಿಜಿಸ್ಟ್ರೇಷನ್ ಅರ್ಹತೆಯಾಗಿದೆ. ಫಾರ್ಮಸಿಸ್ಟ್‍ಗೆ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಫಾರ್ಮ್ ಅಥವಾ ಡಿ.ಫಾರ್ಮ್, ಫಾರ್ಮಸಿ ಕೌನ್ಸಿಲ್ ನೋಂದಣಿಗೊಂಡಿರಬೇಕು. ನಸಿರ್ಂಗ್ ಅಧಿಕಾರಿ ನೇಮಕಾತಿಗೆ ಜನರಲ್ ನಸಿರ್ಂಗ್ ಆಂಡ್ ಮಿಡ್‍ವೈಫರಿ ಕೋರ್ಸ್ ಪೂರೈಸಿರಬೇಕು. ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2282933)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


