ಕೊಲ್ಲಂ: ಐಸ್ ಕ್ರೀಮ್ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಮದುವೆಯ ಆರತಕ್ಷತೆಯಲ್ಲಿ ಸಂಘರ್ಷಕ್ಕೆ ಕಾರಣವಾಯಿತು. ಕೊಲ್ಲಂನ ಪಲ್ಲಿಮುಕ್ಕುವಿನ ಬಿಎಸ್.ಎ ಆಡಿಟೋರಿಯಂನಲ್ಲಿ ಈ ಘಟನೆ ನಡೆದಿದೆ.
ಮದುವೆಯ ನಂತರ ನಡೆದ ಆರತಕ್ಷತೆಯಲ್ಲಿ ವಧುವಿನ ಕೆಲವು ಸಂಬಂಧಿಕರು ಐಸ್ ಕ್ರೀಮ್ ಬೇಡಿಕೆ ಇಟ್ಟರು. ಆದರೆ, ಅಡುಗೆ ಸಿಬ್ಬಂದಿ ಐಸ್ ಕ್ರೀಮ್ ಖಾಲಿಯಾಗಿದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಸಂಬಂಧಿಕರು ಮತ್ತು ಅಡುಗೆ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ನಂತರ ಈ ವಾಗ್ವಾದ ಗ್ಯಾಂಗ್ ಜಗಳವಾಗಿ ಮಾರ್ಪಟ್ಟಿತು. ಬಳಿಕ ಪೋಲೀಸರ ಆಗಮನದೊಂದಿಗೆ ಪ್ರಕರಣ ತಿಳಿಯಾಯಿತು.

