ಕಾಸರಗೋಡು: ನ್ಯುಮೋನಿಯಾ ಬಾಧಿಸಿ ಚಿಕಿತ್ಸೆಯಲ್ಲಿದ್ದ ಶಿಕ್ಷಕ, ಕಣ್ಣೂರಿನ ಅಲಕೋಡ್‍ನ ಕರಿವೇಡನ್‍ಕುಂಡ್ ನಿವಾಸಿ ಹಾಗೂ ಬಂದಡ್ಕ ಕರಿವೇಡಗಂ ಸೇಂಟ್ ಮೇರಿಸ್ ಯುಪಿ ಶಾಲೆಯ ಶಿಕ್ಷಕ ಸಿಜೋ ಕೆ. ಡೊಮಿನಿಕ್ (39)ಮೃತಪಟ್ಟಿದ್ದಾರೆ. ನ್ಯುಮೋನಿಯಾ ಬಾಧಿಸಿ ಕಣ್ಣೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯಟ್ಟುಪರಂಬದ ಸೇಂಟ್ ಜೋಸೆಫ್ಸ್ ಯುಪಿ ಶಾಲೆ, ವಯತ್ತೂರು ಯುಪಿ ಶಾಲೆ ಮತ್ತು ಉಲಿಕ್ಕಲ್‍ನಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಈ ಹಿಂದೆ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದರು.

