ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಖಾಲಿ ಬಿದ್ದಿರುವ ಅಸಿಸ್ಟೆಂಟ್ ಇಂಜಿನಿಯರ್, ಓವರ್ಸಿಯರ್ ಹುದ್ದೆಗಳಿಗೆ ಕೂಡಲೇ ನೇಮಕಾತಿ ನಡೆಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ.ಡಿ ಅವರು ಸ್ಥಳೀಯಾಡಳಿತೆ ಸಚಿವ ಕೆ.ಎಂ.ಶಾಜಿ ಅವರನ್ನು ವಿನಂತಿಸಿದರು. ತಿರುವನಂತಪುರಂ ಸೆಕ್ರೆಟರಿಯೇಟ್ ನಲ್ಲಿ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಇಂಜಿನಿಯರ್, ಓವರ್ಸೀಯರ್ ಮೊದಲಾದ ಹುದ್ದೆಗಳು ಖಾಲಿ ಬಿದ್ದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಕಟ್ಟಡದ ನಂಬ್ರ, ಪರ್ಮಿಟ್, ವಾರ್ಷಿಕ ಯೋಜನೆಯ ಕೆಲಸಗಳು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ನಡೆಸಬೇಕು ಎಂದವರು ಒತ್ತಾಯಿಸಿದರು. ಈ ಬಗ್ಗೆ ಕೂಡಲೇ ಅಗತ್ಯದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆಯನ್ನು ನೀಡಿದರು.

.jpg)
