HEALTH TIPS

ಇ-ರಿಕ್ಷಾಗಳನ್ನು ರಿಮೋಟ್ ಮೂಲಕ ಸ್ಥಗಿತಗೊಳಿಸುವ ವಿಡಿಯೋ ವೈರಲ್‌: ಭದ್ರತಾ ಉದ್ದೇಶದಿಂದ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೆಹಲಿಯಲ್ಲಿ ಇ-ರಿಕ್ಷಾಗಳು ಹಠಾತ್ ಆಗಿ ಸ್ಥಗಿತಗೊಂಡು ನಂತರ ಮುಂದುವರಿಯಲಾಗದೆ ದೂಡಿಕೊಂಡು ಹೋಗುತ್ತಿರುವ ವೀಡಿಯೋಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಇ-ರಿಕ್ಷಾಗಳನ್ನು ರಿಮೋಟ್ ಮೂಲಕ ಸ್ಥಗಿತಗೊಳಿಸಬಹುದು ಎಂದು ಕಳೆದ ಕೆಲವು ದಿನಗಳಲ್ಲಿ ಜನರು ವೀಡಿಯೋಗಳನ್ನು ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಉದ್ದೇಶದಿಂದ ಎರಡು ಸ್ಮಾರ್ಟ್ಫೋನ್ ಅಪ್ಲಿಕೇಶನ್ ಗಳನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.




ಭಾರತದಲ್ಲಿ ಜನಪ್ರಿಯವಾಗುತ್ತಿರುವ ಸಾರಿಗೆ ವಿಧಾನದಲ್ಲಿ ಬ್ಯಾಟರಿ ಚಾಲಿತ ಇ-ರಿಕ್ಷಾಗಳೂ ಸೇರಿವೆ. ಆದರೆ ಇವು ಹೆಚ್ಚಾಗಿ ಚೀನಾ ನಿರ್ಮಿತ ಬ್ಲೂಟೂತ್ ಸಕ್ರಿಯಗೊಳಿಸಿದ ಬ್ಯಾಟರಿ ನಿರ್ವಹಣಾ ಘಟಕಗಳನ್ನು ಬಳಸುತ್ತವೆ. ಅವುಗಳಲ್ಲಿ ಸುರಕ್ಷತಾ ಫೀಚರ್ಗಳನ್ನು ಅಳವಡಿಸಲಾಗಿಲ್ಲ.

ಕಳೆದ ಕೆಲವು ದಿನಗಳಿಂದ ಚೀನಾದ ಬ್ಯಾಟರಿ ನಿರ್ವಹಣಾ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಇ-ರಿಕ್ಷಾಗಳ ಪ್ರಯಾಣವನ್ನು ಮಧ್ಯದಲ್ಲೇ ರಿಮೋಟ್ ಮೂಲಕ ವಿದ್ಯುತ್ ಕಡಿತಗೊಳಿಸಿ ನಿಲ್ಲಿಸುತ್ತಿರುವ ವೀಡಿಯೋಗಳು ದೇಶದಲ್ಲಿ ವೈರಲ್ ಆಗಿವೆ.


ಜನರು ಜನನಿಬಿಡ ಬೀದಿಗಳಲ್ಲಿ ಇ-ರಿಕ್ಷಾಗಳನ್ನು ತಡೆದು ನಿಲ್ಲಿಸುವ ವೀಡಿಯೋಗಳು ಕಳೆದ ಕೆಲವು ದಿನಗಳಿಂದ ವೈರಲ್ ಆಗುತ್ತಿವೆ. ವಾಹನವನ್ನು ಸಮೀಪಿಸಿ ಬ್ಲೂಟೂತ್ ಮೂಲಕ ವಾಹನದ ಬ್ಯಾಟರಿ ವ್ಯವಸ್ಥೆಗೆ ಸಂಪರ್ಕ ಸಾಧಿಸುವುದನ್ನು ಮತ್ತು ಡಿಸ್ಚಾರ್ಜ್ ಸ್ವಿಚ್ ಮೂಲಕ ಮೋಟಾರ್ಗೆ ವಿದ್ಯುತ್ ಕಡಿತಗೊಳಿಸುವ ಮೂಲಕ ಅದನ್ನು ನಿಲ್ಲಿಸುವುದನ್ನು ವೀಡಿಯೋಗಳು ತೋರಿಸುತ್ತಿವೆ.

ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿ ಎಸ್ ಕೃಷ್ಣನ್ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ, ಅವರ ಗಮನಕ್ಕೆ ತಂದಿರುವ ಒಂದೆರಡು ಅಪ್ಲಿಕೇಶನ್ಗಳನ್ನು ಆಯಪ್‌ ಸ್ಟೋರ್ ಗಳಿಂದ ತೆಗೆದುಹಾಕಲಾಗಿದೆ. ಕೃಷ್ಣನ್ ಹೆಚ್ಚುವರಿ ವಿವರ ನೀಡದೆ ಇದ್ದರೂ, ಎರಡು ಅಪ್ಲಿಕೇಶನ್ಗಳನ್ನು ಚೀನಾದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅವುಗಳನ್ನು "BAT-BMS" ಮತ್ತು "Epoch Li-ion" ಎಂದು ಕರೆಯಲಾಗುತ್ತಿತ್ತು ಎಂದು ವರದಿಯಾಗಿದೆ.

ಬ್ಲೂಟೂತ್-ಸಕ್ರಿಯಗೊಂಡಿರುವ ಲೀಥಿಯಂ ಬ್ಯಾಟರಿ ಪ್ಯಾಕ್ಗಳನ್ನು ಹೊಂದಿರುವ ರಿಕ್ಷಾಗಳು ಮಾತ್ರ ಪರಿಣಾಮ ಬೀರಿವೆಯೇ ವಿನಾ ಲೆಡ್ ಆಸಿಡ್ ಬ್ಯಾಟರಿಗಳಲ್ಲಿ ಚಲಿಸುವ ರಿಕ್ಷಾಗಳ ಮೇಲೆ ಪರಿಣಾಮವಾಗಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries