HEALTH TIPS

ಹೈಕೋರ್ಟ್ ನ್ಯಾಯಾಧೀಶರನ್ನು ನಿಂದಿಸಿದ ಭೂಪ; ಯುವಕನನ್ನು ವಶಕ್ಕೆ ಪಡೆದು ದಂಡ

ಕೊಚ್ಚಿ: ಹೈಕೋರ್ಟ್ ನ್ಯಾಯಾಧೀಶರನ್ನು ನಿಂದಿಸಿದ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ಸಂಜೆ 5:30 ರ ಸುಮಾರಿಗೆ ನ್ಯಾಯಾಧೀಶರು ತಮ್ಮ ಅಧಿಕೃತ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ಪಚಲಂ ಕೆ.ಎಸ್. ಉದಯನ್ ರಸ್ತೆಯ ಬಳಿ ಈ ಘಟನೆ ನಡೆದಿದೆ.

ಅಜಾಗರೂಕತೆಯಿಂದ ಸ್ಕೂಟರ್ ಸವಾರಿ ಮಾಡುತ್ತಿದ್ದ ಆರೋಪಿ, ನ್ಯಾಯಾಧೀಶರಿದ್ದ ವಾಹನದತ್ತ ಮುಖಮಾಡಿ "ನಿನ್ನ ವಾಹನವನ್ನು ಕೊಂಡೊಯ್ಯೋ ಬೋ...ಮಗನೇ " ಎಂಬಿತ್ಯಾದಿ ಅವಾಚ್ಯ ಪದಗಳಿಂದ ನಿಂದಿಸಿದ್ದ. ಸ್ಕೂಟರ್ ನಿಲ್ಲಿಸದೆ ಚಲಾಯಿಸಿದ್ದು ನ್ಯಾಯಾಧೀಶರ ಭದ್ರತಾ ಅಧಿಕಾರಿ ಕೆ. ಕಾರ್ತಿಕ್ ಈ ಬಗ್ಗೆ ದೂರು ದಾಖಲಿಸಿದ್ದರು. ಎರ್ನಾಕುಳಂ ನಗರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ನಿನ್ನೆ ಆರೋಪಿಯನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries