ಬದಿಯಡ್ಕ: ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿನದ ಅಂಗವಾಗಿ ಬಿ.ಎಂ.ಎಸ್. ನಾರಂಪಾಡಿ ಘಟಕದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸತ್ಯನಾರಾಯಣ ಭಟ್ ಧ್ವಜಾರೋಹಣ ನೆರವೇರಿಸಿದರು. ಘಟಕದ ಅಧ್ಯಕ್ಷ ಗಿರೀಶ್ ಮುಂಡೋಳುಮೂಲೆ ಅಧ್ಯಕ್ಷತೆ ವಹಿಸಿದರು. ಪ್ರಕಾಶ್ ಪಾವೂರು ಅವರು ಸ್ಥಾಪನಾ ದಿನದ ಸಂದೇಶ ನೀಡಿ ಮಾತನಾಡಿದರು. ಬಿ.ಎಂ.ಎಸ್.ನ ಸಂಘಟನಾ ಕಾರ್ಯಚಟುವಟಿಕೆಗಳು ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಸಂಘ ನಡೆಸುತ್ತಿರುವ ಸೇವಾ ಕಾರ್ಯಗಳ ಮಹತ್ವವನ್ನು ವಿವರಿಸಿದರು. ಹರೀಶ್ ನಾರಂಪಾಡಿ, ಉದಯ ನೆಲ್ಯಡ್ಕ, ವಸಂತ ಬೆಳ್ಳಿಗೆ ಭಾಗವಹಿಸಿದ್ದರು. ಹರೀಶ್ ಮುಂಡೋಳುಮೂಲೆ ಸ್ವಾಗತಿಸಿ, ಸುರೇಶ್ ಮುಂಡೋಳುಮೂಲೆ ವಂದಿಸಿದರು.


