HEALTH TIPS

DRDO ಪ್ರಯೋಗಾಲಯದಲ್ಲಿ ಸಿದ್ಧವಾದ ಆಮ್‌ರಸ್ ಮತ್ತು ಕ್ಯಾರೆಟ್ ಹಲ್ವಾ ಬಾಹ್ಯಾಕಾಶ ತಲುಪಿದ್ದು ಹೇಗೆ? ಶುಕ್ಲಾ ನೆನಪು

 ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದಾಗ ಅವರು ತಮ್ಮೊಂದಿಗೆ ಭಾರತೀಯ ಅಡುಗೆಯನ್ನು ಕೊಂಡೊಯ್ದಿದ್ದರು ಎನ್ನುವುದು ನಿಮಗೆ ಗೊತ್ತೆ?

ಆದರೆ, ಶುಭಾಂಶು ಶುಕ್ಲಾ ಯೋಜಿಸಿದ್ದಕ್ಕಿಂತ ಬಹಳ ಕಡಿಮೆ ಪ್ರಮಾಣದ ಆಹಾರವನ್ನು ಮಾತ್ರ ಕೊಂಡೊಯ್ದಿದ್ದರು. 


ರಾಜ್ ಶಮಾನಿ ಅವರೊಂದಿಗೆ ನಡೆದ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಶುಕ್ಲಾ, ಭಾರತದ ಮುಂಬರುವ ಗಗನ್‌ಯಾನ್ ಮಿಷನ್‌ಗಾಗಿ ಬಾಹ್ಯಾಕಾಶ ಆಹಾರವನ್ನು ಅಭಿವೃದ್ಧಿಪಡಿಸುತ್ತಿರುವ ಆಖಆಔ ಅಡಿಯಲ್ಲಿನ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೋರೇಟರಿ (ಆಈಖಐ), ಆಕ್ಸಿಯಮ್-4 ಮಿಷನ್‌ನೊಂದಿಗೆ ಬಾಹ್ಯಾಕಾಶಕ್ಕೆ ಕಳುಹಿಸಲು ಭಾರತೀಯ ಭಕ್ಷ್ಯಗಳ ವ್ಯಾಪಕ ಮೆನುವನ್ನು ಸಿದ್ಧಪಡಿಸಿತ್ತು. ಆದರೆ, ಕ್ಯಾರೆಟ್ ಹಲ್ವಾ, ಹೆಸರು ಬೇಳೆ ಹಲ್ವಾ ಮತ್ತು ಆಮ್‌ರಸ್ ಮಾತ್ರ ಆಯ್ಕೆಯಾಗಿದ್ದವು ಎಂದು ಬಹಿರಂಗಪಡಿಸಿದ್ದಾರೆ.

"ನಾವು ಭಾರತೀಯ ಆಹಾರಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದೆವು. ಆಖಆಔ ಅಡಿಯಲ್ಲಿ ಕಾರ್ಯನಿರ್ವಹಿಸುವ ಆಈಖಐ, ಗಗನಯಾನ ಮಿಷನ್‌ಗಾಗಿ ಆಹಾರವನ್ನು ತಯಾರಿಸುತ್ತಿದೆ. ಸಾಧ್ಯವಾದಷ್ಟು ಆಹಾರಗಳಿಗೆ ಅರ್ಹತೆ ಪಡೆಯುವುದು ಇದರ ಉದ್ದೇಶವಾಗಿತ್ತು. ಆಹಾರವು ನಿಲ್ದಾಣಕ್ಕೆ ಹಾರಲು ಸಾಧ್ಯವಾದರೆ, ಅದನ್ನು ಪ್ರಮಾಣೀಕರಿಸಲಾಗುತ್ತದೆ ಮತ್ತು ಬಾಹ್ಯಾಕಾಶಕ್ಕೆ ಕಳುಹಿಸಬಹುದು" ಎಂದು ಶುಕ್ಲಾ ಹೇಳಿದ್ದಾರೆ.

ಆಈಖಐ ಸಿದ್ಧಪಡಿಸಿದ್ದ ಮೂಲ ಮೆನುವಿನಲ್ಲಿ ಖಿಚಡಿ, ಪಲಾವ್, ತರಕಾರಿಗಳು ಮತ್ತು ಇತರ ಅನೇಕ ಭಾರತೀಯ ಭಕ್ಷ್ಯಗಳು ಸೇರಿದ್ದವು. ಆದರೆ, ಬಾಹ್ಯಾಕಾಶಕ್ಕೆ ಆಹಾರವನ್ನು ಅನುಮೋದಿಸುವುದು ಊಟವನ್ನು ತಯಾರಿಸುವಷ್ಟು ಸುಲಭವಲ್ಲ. ಶುಕ್ಲಾ ಅವರ ಪ್ರಕಾರ, ಉಳಿದ ಭಕ್ಷ್ಯಗಳು ಅಂತರಿಕ್ಷಯಾನದಲ್ಲಿ ಹಾರದಿರಲು ಒಂದೇ ಒಂದು ಕಾರಣವಿರಲಿಲ್ಲ. ಆದರೆ, ಸಮಯವೇ ದೊಡ್ಡ ಸವಾಲಾಗಿತ್ತು.

"ಅವರು ಕೆಲವು ಹೆಚ್ಚುವರಿ ಪರೀಕ್ಷೆಗಳನ್ನು ಮಾಡಲು ಬಯಸಿದ್ದಿರಬಹುದು. ಆದರೆ, ಅದಕ್ಕೆ ಸಾಕಷ್ಟು ಸಮಯವಿರಲಿಲ್ಲ. ಆದ್ದರಿಂದ, ಕೇವಲ ಮೂರು ಆಹಾರಗಳಿಗೆ ಮಾತ್ರ ಅರ್ಹತೆ ದೊರಕಿತ್ತು" ಎಂದು ಅವರು ವಿವರಿಸಿದರು.

ಬಾಹ್ಯಾಕಾಶಕ್ಕೆ ಹಾರಿಸಲಾದ ಆಹಾರವು ಶೈತ್ಯೀಕರಣವಿಲ್ಲದೆ ತಿಂಗಳುಗಳವರೆಗೆ ಸುರಕ್ಷಿತವಾಗಿ, ಪೌಷ್ಠಿಕವಾಗಿ ಮತ್ತು ಸ್ಥಿರವಾಗಿ ಉಳಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಪರೀಕ್ಷೆಗೆ ಒಳಗಾಗಬೇಕು. ಆಹಾರವು ಉಡಾವಣೆಯ ವೇಳೆ ಉಂಟಾಗುವ ಕಂಪನಗಳನ್ನು ತಡೆದುಕೊಳ್ಳಬೇಕು. ಮೈಕ್ರೊಗ್ರಾವಿಟಿಯಲ್ಲಿ ಸುರಕ್ಷಿತವಾಗಿ ಬಳಸಲು ಸಾಧ್ಯವಾಗಬೇಕು. ತೇಲುವ ಆಹಾರದ ತುಂಡುಗಳು ಇರಬಾರದು ಅಥವಾ ಹೆಚ್ಚುವರಿ ತೇವಾಂಶವನ್ನು ಉತ್ಪಾದಿಸಬಾರದು. ಅಲ್ಲದೆ, ಕಟ್ಟುನಿಟ್ಟಾದ ಸೂಕ್ಷ್ಮಜೀವಿ ಸುರಕ್ಷತಾ ಮಾನದಂಡಗಳನ್ನು ಪೂರೈಸಬೇಕು.

ಭಾರತದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನಯಾನ ಮಿಷನ್‌ಗಾಗಿ ಆಖಆಔ ವ್ಯಾಪಕವಾದ ಭಕ್ಷ್ಯಗಳ ಮೆನುವನ್ನು ಸಿದ್ಧಪಡಿಸುತ್ತಿದೆ. ಇದನ್ನು ಭಾರತೀಯ ಏಜೆನ್ಸಿಗಳು ಅರ್ಹಗೊಳಿಸಿ ಪ್ರಮಾಣೀಕರಿಸಲು ಸಿದ್ಧಪಡಿಸುತ್ತಿವೆ. ಶುಕ್ಲಾ ಅವರು ಮೂರು ಪ್ರಮಾಣೀಕೃತ ಭಾರತೀಯ ಭಕ್ಷ್ಯಗಳನ್ನು ಸೇವಿಸಲು ಸಾಧ್ಯವಾಗದಿದ್ದರೂ, ಉಳಿದ ಅಂತರರಾಷ್ಟ್ರೀಯ ಸಿಬ್ಬಂದಿ ಬಾಹ್ಯಾಕಾಶದಲ್ಲಿ ಅವುಗಳನ್ನು ಸೇವಿಸಿದ್ದಾರೆ.

"ನಾನು ಯಾವುದೇ ಭಾರತೀಯ ಆಹಾರವನ್ನು ತಿನ್ನಲಿಲ್ಲ. ಏಕೆಂದರೆ, ಎಲ್ಲಾ ಮೂರು ವಸ್ತುಗಳನ್ನು ಸಿಬ್ಬಂದಿಯೊಂದಿಗೆ ಹಂಚಿಕೊಂಡೆ. ಅವರು ನಿಜವಾಗಿಯೂ ಅವುಗಳನ್ನು ಆನಂದಿಸಿದರು. ಬಾಹ್ಯಾಕಾಶದಲ್ಲಿರುವಾಗ ಆಹಾರವನ್ನು ಹಂಚಿಕೊಳ್ಳುವುದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿದೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.

ತಮ್ಮ ಬಾಹ್ಯಾಕಾಶ ಪಯಣದ 13ನೇ ದಿನದಿಂದ ಪರಿಚಿತ ಆಹಾರದ ರುಚಿಯನ್ನು ಬಯಸಲು ಆರಂಭಿಸಿದ್ದರು. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಜೀವನವು ಮಾನವ ದೇಹವನ್ನು ಅನಿರೀಕ್ಷಿತ ರೀತಿಯಲ್ಲಿ ಬದಲಿಸುತ್ತದೆ. ತಲೆಯ ಕಡೆಗೆ ದ್ರವದ ಹರಿವು ಹೆಚ್ಚಾಗುವುದರಿಂದ ಸಾಮಾನ್ಯವಾಗಿ ಗಗನಯಾತ್ರಿಗಳಿಗೆ ಮೂಗು ಮುಚ್ಚಿಕೊಂಡಿರುವಂತೆ ಭಾಸವಾಗುತ್ತದೆ. ಹೀಗಾಗಿ, ರುಚಿ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಲ್ಲದೆ, ದೀರ್ಘಾವಧಿಯ ಕಾರ್ಯಾಚರಣೆಯ ಸಂದರ್ಭದಲ್ಲಿ ಗಗನಯಾತ್ರಿಗಳ ಆರೋಗ್ಯ ರಕ್ಷಣೆಗೆ ನಾಸಾದ ಬಾಹ್ಯಾಕಾಶ ಆಹಾರವನ್ನು ಸಾಮಾನ್ಯವಾಗಿ ಕಡಿಮೆ ಸೋಡಿಯಂ ಮಟ್ಟದಲ್ಲಿ ತಯಾರಿಸಲಾಗುತ್ತದೆ. ಹೀಗಾಗಿ, ಅವರು ಉಪ್ಪು ಮತ್ತು ಮಸಾಲೆಭರಿತ ಆಹಾರವನ್ನು ಬಯಸಲಾರಂಭಿಸಿದ್ದರು.

ಅವರು ಫ್ಲೈಟ್ ಸರ್ಜನ್‌ಗೆ, "ಉಪ್ಪಿರುವ ಆಹಾರ ಏನಾದರೂ ಸಿಗಬಹುದೇ?" ಎಂದು ಪ್ರಶ್ನೆಯನ್ನೂ ಕೇಳಿದ್ದರು.

ಅಂತಿಮವಾಗಿ, ಭೂಮಿಗೆ ಹಿಂತಿರುಗಿದ ನಂತರವೇ ಅವರು ಉಪ್ಪಿರುವ ಆಹಾರವನ್ನು ಸೇವಿಸಿದರು. ಭಾರತೀಯ ಫ್ಲೈಟ್ ಸರ್ಜನ್ ಅವರು ಬಾಳೆಹಣ್ಣಿನ ಚಿಪ್ಸ್ ಮತ್ತು ಭಕರವಾಡಿ ನೀಡಿ ಅವರನ್ನು ಸ್ವಾಗತಿಸಿದ್ದರು. ಭವಿಷ್ಯದ ಗಗನಯಾನ ಗಗನಯಾತ್ರಿಗಳಿಗಾಗಿ ವ್ಯಾಪಕ ಶ್ರೇಣಿಯ ಭಾರತೀಯ ಬಾಹ್ಯಾಕಾಶ ಆಹಾರವನ್ನು ಅಭಿವೃದ್ಧಿಪಡಿಸುತ್ತಿರುವ DFRLಗೆ ಶುಕ್ಲಾ ಅವರ ಅನುಭವ ಅಮೂಲ್ಯವಾದ ಪಾಠವನ್ನು ಒದಗಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries