HEALTH TIPS

ಟೊರೆಸ್ ಗೋಲಿಗೆ ಮಣಿದ ಅರ್ಜೆಂಟೀನಾ; ಸ್ಪೇನ್‌ ಗೆ ಎರಡನೇ FIFA ವಿಶ್ವಕಪ್ ಕಿರೀಟ

ನ್ಯೂಜೆರ್ಸಿ: ಯುರೋ ಚಾಂಪಿಯನ್ ಸ್ಪೇನ್ ತಂಡವು ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡವನ್ನು 1-0 ಗೋಲು ಅಂತರದಿಂದ ಮಣಿಸುವುದರೊಂದಿಗೆ 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2010ರ ನಂತರ ಎರಡನೇ ಬಾರಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ.

ಭಾನುವಾರ ತಡರಾತ್ರಿ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ನಿಗದಿತ 90 ನಿಮಿಷಗಳ ಅವಧಿಯಲ್ಲಿ ಒಂದೂ ಗೋಲು ದಾಖಲಾಗಲಿಲ್ಲ. ಬಳಿಕ ಹೆಚ್ಚುವರಿ ಸಮಯದ 16ನೇ ನಿಮಿಷದಲ್ಲಿ ಫೆರನ್ ಟೊರೆಸ್ ಸ್ಪೇನ್ ತಂಡದ ಗೆಲುವಿನ ಗೋಲನ್ನು ಬಾರಿಸಿದರು. ಇದು ಸ್ಪೇನ್ ಪಂದ್ಯದಲ್ಲಿ ನಡೆಸಿದ 20ನೇ ಗೋಲು ಪ್ರಯತ್ನವಾಗಿತ್ತು.

ಹೆಚ್ಚುವರಿ ಸಮಯದ ಮೊದಲಾರ್ಧದಲ್ಲಿ ನಿಕೊ ವಿಲಿಯಮ್ಸ್ ಗೋಲು ಗಳಿಸಿದ್ದರೂ, ಅದಕ್ಕೂ ಮುನ್ನ ಸ್ಪೇನ್ ಆಟಗಾರರಿಂದ ಫೌಲ್ ನಡೆದಿರುವುದು ವಿಡಿಯೊ ಸಹಾಯಕ ತೀರ್ಪುಗಾರರ (VAR) ಪರಿಶೀಲನೆಯಲ್ಲಿ ದೃಢಪಟ್ಟ ಕಾರಣ ಗೋಲನ್ನು ರದ್ದುಗೊಳಿಸಲಾಯಿತು.

ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ನಿಗದಿತ ಸಮಯದಲ್ಲಿ 10 ಅದ್ಭುತ ಸೇವ್‌ಗಳನ್ನು ಮಾಡಿ ವಿಶ್ವಕಪ್ ಫೈನಲ್‌ನಲ್ಲಿ ಗೋಲ್‌ಕೀಪರ್ ಒಬ್ಬರು ದಾಖಲಿಸಿದ ಅತಿ ಹೆಚ್ಚು ಸೇವ್‌ಗಳ ದಾಖಲೆಯನ್ನು ನಿರ್ಮಿಸಿದರು. ಆದರೆ ಟೊರೆಸ್ ಅವರ ನಿರ್ಣಾಯಕ ಗೋಲನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ.

ಪಂದ್ಯದ ಅಂತಿಮ ಹಂತದಲ್ಲಿ ಮಿಡ್‌ಫೀಲ್ಡರ್ ಎಂಜೊ ಫೆರ್ನಾಂಡಿಸ್ ಕೆಂಪು ಕಾರ್ಡ್ ಪಡೆದ ಕಾರಣ ಅರ್ಜೆಂಟೀನಾ 10 ಆಟಗಾರರೊಂದಿಗೆ ಪಂದ್ಯವನ್ನು ಮುಗಿಸಿತು. ಇದೇ ವೇಳೆ ಡಿಫೆಂಡರ್ ಲಿಸಾಂಡ್ರೊ ಮಾರ್ಟಿನೆಜ್ ಗಾಯಗೊಂಡು ಮೈದಾನ ತೊರೆಯಬೇಕಾಯಿತು.

ಈ ಗೆಲುವಿನೊಂದಿಗೆ ಸ್ಪೇನ್ ಎರಡನೇ ಬಾರಿ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡರೆ, ಮೆಸ್ಸಿ ನೇತೃತ್ವದ ಅರ್ಜೆಂಟೀನಾದ ವಿಶ್ವಚಾಂಪಿಯನ್ ಪಯಣಕ್ಕೆ ತೆರೆ ಬಿತ್ತು. ಫೆರಾನ್ ಟೊರೆಸ್ ಅವರ 106ನೇ ನಿಮಿಷದ ಗೋಲು ವಿಶ್ವಕಪ್ ಇತಿಹಾಸದ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ದಾಖಲಾಗಿತು.

80,000ಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್ ಫೈಟ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ಅರ್ಜೆಂಟೀನಕ್ಕೆ ಸೋಲಿನ ಬರೆ ಎಳೆದಿರುವ ಸ್ಪೇನ್ ತಂಡವು ಸುಮಾರು 480 ಕೋಟಿ ರೂ. ನಗದು ಪುರಸ್ಕಾರ, ಚಾಂಪಿಯನ್‌ಶಿಪ್ ರಿಂಗ್ ತನ್ನದಾಗಿಸಿಕೊಂಡಿದೆ. ರನ್ನರ್ಸ್ ಅಪ್ ತಂಡ ಅರ್ಜೆಂಟೀನ ಸುಮಾರು 315 ಕೋಟಿರೂ. ಬಹುಮಾನ ಗೆದ್ದುಕೊಂಡಿದೆ.

ಎಂಝೋ ಫೆರ್ನಾಂಡಿಸ್‌ಗೆ ಕೆಂಪು ಕಾರ್ಡ್

ಗಾಯದ ಅವಧಿಯ ಮೂರನೇ ನಿಮಿಷದಲ್ಲಿ ಸ್ಪೇನ್ ಆಟಗಾರನನ್ನು ಕೆಡವಿದ ಅರ್ಜೆಂಟೀನದ ಎಂರೊ ಫೆರ್ನಾಂಡಿಸ್‌ಗೆ ರೆಫರಿ, ಕೆಂಪು ಕಾರ್ಡ್ ನೀಡಿದರು. ಹೀಗಾಗಿ ಅರ್ಜೆಂಟೀನ ತಂಡ 10 ಆಟಗಾರರೊಂದಿಗೆ ಆಡಬೇಕಾಯಿತು.

ಅರ್ಜೆಂಟೀನದ ಆರು ಆಟಗಾರರಿಗೆ ಹಳದಿ ಕಾರ್ಡ್ : ಅರ್ಜೆಂಟೀನದ ಲಿಸಾಂಡ್ರೊ ಮಾರ್ಟಿನೇಝ್‌ಗೆ 41ನೇ ನಿಮಿಷದಲ್ಲಿ , ಲಿಯಾಂಡ್ರೊ ಪರೆಡಿಸ್‌ಗೆ 52ನೇ ನಿಮಿಷದಲ್ಲಿ , ಎಂರೊ ಫೆರ್ನಾಂಡಿಸ್‌ಗೆ 82ನೇ ನಿಮಿಷದಲ್ಲಿ , ರೊಮೆರೊಗೆ 92ನೇ ನಿಮಿಷದಲ್ಲಿ , ಸಿಮಿಯೋನ್‌ಗೆ 105ನೇ ನಿಮಿಷದಲ್ಲಿ ಹಾಗೂ 111ನೇ ನಿಮಿಷದಲ್ಲಿ ಅಲೆಕ್ಸಿಸ್ ಮ್ಯಾಕ್ಸ್ ಅಲಿಸ್ಟರ್‌ಗೆ ಹಳದಿ ಕಾರ್ಡ್ ನೀಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries