HEALTH TIPS

NEET ಉತ್ತರಪತ್ರಿಕೆ ಪ್ರತಿ ನೀಡದ ಆರೋಪ : NTAಗೆ ಮುಂಬೈ ವಿದ್ಯಾರ್ಥಿನಿ ನೋಟಿಸ್

ನವದೆಹಲಿ: ಪದೇ ಪದೇ ವಿನಂತಿಸಿದರು ತನ್ನ ಒಎಂಆರ್ ಉತ್ತರ ಪತ್ರಿಕೆ ಪ್ರತಿಯನ್ನು ನೀಡಿಲ್ಲ ಎಂದು ಆರೋಪಿಸಿ ನೀಟ್-ಯುಜಿ ಮರು ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಟಿಎ)ಗೆ ಗುರುವಾರ ಕಾನೂನು ನೋಟಿಸ್ ನೀಡಿದ್ದಾರೆ. 


ತಾನು ನಿರೀಕ್ಷಿಸಿದ್ದ 468 ಅಂಕಗಳಿಗೆ ಬದಲಾಗಿ 266 ಅಂಕಗಳನ್ನು ಪಡೆದಿರುವ ಮುಂಬೈ ಮೂಲದ ಈ ವಿದ್ಯಾರ್ಥಿನಿ ಎರಡು ದಿನಗಳ ಒಳಗೆ ತನ್ನ ಉತ್ತರ ಪತ್ರಿಕೆಯ ದಾಖಲೆಗಳನ್ನು ನೀಡುವಂತೆ ಕೋರಿದ್ದಾರೆ.

ವಿದ್ಯಾರ್ಥಿನಿಯ ಪರ ವಾದ ಮಂಡಿಸುತ್ತಿರುವ ವಕೀಲ ವಿನೀತ್ ಜಿಂದಾಲ್ ಅವರು, ಜುಲೈ 13-15ರ ನಡುವಿನ ಅವಧಿಯಲ್ಲಿ ಎನ್‌ಟಿಎ ಪೋರ್ಟಲ್‌ನ ಸರ್ವರ್ ಬ್ಯುಸಿಯಾಗಿದ್ದುದರಿಂದ ಮತ್ತು ತಾಂತ್ರಿಕ ದೋಷ ಪ್ರದರ್ಶಿಸುತ್ತಿದ್ದುದರಿಂದ ಅವರಿಗೆ ಒಎಂಆರ್ ಶೀಟ್ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಒಎಂಆರ್ ಶೀಟ್‌ಗೆ ಸಂಬಂಧಿಸಿ ಅವರಿಗೆ ಯಾವುದೇ ಇಮೇಲ್ ಅಥವಾ ಎಸ್‌ಎಂಎಸ್ ಬಂದಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪತ್ರಿಕೆ ನೀಡಲು ನಿರಾಕರಿಸಿರುವುದು ಸ್ವೇಚ್ಛಾಚಾರದ ನಡವಳಿಕೆ. ಇದು ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಸಹಜ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ'' ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಅಭ್ಯರ್ಥಿಗಳು ತಮ್ಮ ಉತ್ತರ ಪತ್ರಿಕೆ ಪಡೆಯುವ ಹಕ್ಕನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಲು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ನಿರಾಕರಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries