HEALTH TIPS

ಒಂದು Smartphone ಎಷ್ಟು ವರ್ಷ ಬಳಸಬಹುದು? ಹೊಸ ಫೋನ್ ಯಾವಾಗ ಖರೀದಿಸಬೇಕು?

 ಪ್ರಸ್ತುತ ದಿನಗಳಲ್ಲಿ Smartphone ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎನ್ನುವುದರಲ್ಲಿ ತಪ್ಪಿಲ್ಲ. ಬ್ಯಾಂಕಿಂಗ್‌ನಿಂದ ಹಿಡಿದು ಆನ್‌ಲೈನ್ ಕ್ಲಾಸ್‌, ಆಫೀಸ್‌ ವರ್ಕ್‌, ಮನರಂಜನೆ, ಫೋಟೋಗ್ರಫಿ ಹಾಗೂ ಆರೋಗ್ಯದ ಮಾಹಿತಿವರೆಗೂ ಎಲ್ಲವೂ ಈಗ ಸ್ಮಾರ್ಟ್‌ಫೋನಿನಲ್ಲೇ ನಡೆಯುತ್ತಿದೆ. ಹೀಗಾಗಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಿದಾಗ ಅದು ಸಾಧ್ಯವಾದಷ್ಟು ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂಬುದು ಸಾಮಾನ್ಯವಾಗಿ ಎಲ್ಲ ಖರೀದಿದಾರರ ಆಶಯ ಆಗಿರುತ್ತದೆ. ಆದರೆ ಒಂದು ಸ್ಮಾರ್ಟ್‌ಫೋನ್ ಅನ್ನು ಎಷ್ಟು ವರ್ಷ ಬಳಸಬಹುದು? ಯಾವಾಗ ಅದನ್ನು ಬದಲಾಯಿಸುವುದು ಸೂಕ್ತ? ಎಂಬ ಪ್ರಶ್ನೆ ಅನೇಕ ಬಳಕೆದಾರರಲ್ಲಿ ಇದೆ. ಹಾಗಾದರೆ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ. 


Smartphone  ಸಾಫ್ಟ್‌ವೇರ್ ಅಪ್‌ಡೇಟ್‌ ಸಪೋರ್ಟ್‌

ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳು 4 ರಿಂದ 6 ವರ್ಷಗಳ ವರೆಗೆ ಯಾವುದೇ ದೊಡ್ಡ ಸಮಸ್ಯೆಯಿಲ್ಲದೆ ಬಳಸಬಹುದಾಗಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಕಂಪನಿಗಳು ಹಲವು ವರ್ಷಗಳ ಸಾಫ್ಟ್‌ವೇರ್ ಮತ್ತು ಭದ್ರತಾ ಅಪ್‌ಡೇಟ್‌ಗಳನ್ನು ನೀಡುವುದರಿಂದ ಅವು ಹೆಚ್ಚು ಕಾಲ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುತ್ತವೆ. ಇನ್ನು ಮೀಡ್‌ರೇಂಜ್‌ ಬೆಲೆಯ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೂ ಈಗ ಹಿಂದಿನಕ್ಕಿಂತ ಹೆಚ್ಚು ವರ್ಷಗಳ ಅಪ್‌ಡೇಟ್‌ಗಳು ಲಭ್ಯವಾಗುತ್ತಿವೆ.

ಫೋನ್‌ ಹೇಗೆ ಬಳಸಿದ್ದೀರಿ ಎಂಬುದು ಮುಖ್ಯ

ಸ್ಮಾರ್ಟ್‌ಫೋನ್‌ನ ಆಯುಷ್ಯವನ್ನು ನಿರ್ಧರಿಸುವುದು ಕೇವಲ ಅದರ ಬೆಲೆ ಅಲ್ಲ. ನೀವು ಸ್ಮಾರ್ಟ್‌ಫೋನ್‌ ಅನ್ನು ಹೇಗೆ ಬಳಸುತ್ತೀರಿ ಎಂಬುದೂ ಸಹ ಅಷ್ಟೇ ಮುಖ್ಯವಾಗುತ್ತದೆ. ಅತಿಯಾದ ಗೇಮಿಂಗ್, ಸದಾ ಪೂರ್ಣ ಮೆಮೊರಿ ತುಂಬಿರುವುದು, ಹಲವು ಅನಗತ್ಯ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವುದು ಮತ್ತು ಫೋನ್ ಅನ್ನು ಬಿಸಿಯಾಗುವ ಪರಿಸ್ಥಿತಿಯಲ್ಲಿ ಬಳಸುವುದು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ಬ್ಯಾಟರಿ ಕೈ ಕೊಡುವ ಸಾಧ್ಯತೆ

ಸ್ಮಾರ್ಟ್‌ಫೋನ್‌ ಬಾಳಿಕೆಯಲ್ಲಿ ಬ್ಯಾಟರಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ 2 ರಿಂದ 3 ವರ್ಷಗಳ ನಂತರ ಬ್ಯಾಟರಿಯ ಸಾಮರ್ಥ್ಯ ನಿಧಾನವಾಗಿ ಕಡಿಮೆಯಾಗಲು ಆರಂಭಿಸುತ್ತದೆ. ದಿನಕ್ಕೆ ಹಲವಾರು ಬಾರಿ ಚಾರ್ಜ್ ಮಾಡಬೇಕಾಗುವುದು, ಬ್ಯಾಟರಿ ಬೇಗ ಖಾಲಿಯಾಗುವುದು ಅಥವಾ ಫೋನ್ ಅತಿಯಾಗಿ ಬಿಸಿಯಾಗುವುದು ಇಂತಹ ಲಕ್ಷಣಗಳು ಕಂಡುಬಂದರೆ ಬ್ಯಾಟರಿ ಬದಲಾಯಿಸುವ ಬಗ್ಗೆ ಯೋಚಿಸಬಹುದು. ಕೆಲವೊಮ್ಮೆ ಕೇವಲ ಬ್ಯಾಟರಿ ಬದಲಾಯಿಸಿದರೆ ಫೋನ್ ಮತ್ತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಸಾಫ್ಟ್‌ವೇರ್ ಅಪ್‌ಡೇಟ್‌ಗಳು ನಿಲ್ಲುವುದು ಕೂಡ ಹೊಸ ಫೋನ್ ಖರೀದಿಸಲು ಪ್ರಮುಖ ಕಾರಣವಾಗಬಹುದು. ಹೊಸ ಭದ್ರತಾ ಅಪ್‌ಡೇಟ್‌ಗಳು ಸಿಗದಿದ್ದರೆ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಜೊತೆಗೆ, ಹೊಸ ಆ್ಯಪ್‌ಗಳು ಅಥವಾ ಫೀಚರ್‌ಗಳು ಹಳೆಯ ಫೋನ್‌ನಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು.

ಹಾಗಾದರೆ ಹೊಸ ಫೋನ್ ಖರೀದಿಸುವ ಸಮಯ ಯಾವಾಗ? ನಿಮ್ಮ ಫೋನ್ ನಿರಂತರವಾಗಿ ನಿಧಾನವಾಗುತ್ತಿದ್ದರೆ, ಪ್ರಮುಖ ಅಪ್‌ಡೇಟ್‌ಗಳು ದೊರೆಯುತ್ತಿಲ್ಲ, ಬ್ಯಾಟರಿ ಬೇಗ ಖಾಲಿಯಾಗುತ್ತಿದೆ, ದುರಸ್ತಿ ವೆಚ್ಚ ಹೆಚ್ಚಾಗಿದೆ ಅಥವಾ ನಿಮ್ಮ ಅಗತ್ಯಗಳಿಗೆ ತಕ್ಕ ಕಾರ್ಯಕ್ಷಮತೆ ನೀಡುತ್ತಿಲ್ಲ ಎಂದಾದರೆ ಹೊಸ ಸಾಧನಕ್ಕೆ ಅಪ್‌ಗ್ರೇಡ್ ಮಾಡುವ ಬಗ್ಗೆ ಯೋಚಿಸಬಹುದು. ಆದರೆ ಕೇವಲ ಹೊಸ ಮಾಡೆಲ್‌ ಬಿಡುಗಡೆಯಾಗಿದೆ ಎಂಬ ಕಾರಣಕ್ಕೆ ಫೋನ್ ಬದಲಾಯಿಸುವ ಅಗತ್ಯವಿಲ್ಲ.

ಒಟ್ಟಾರೇ, ಸರಿಯಾದ ಕಾಳಜಿ, ನಿಯಮಿತ ಸಾಫ್ಟ್‌ವೇರ್ ಅಪ್‌ಡೇಟ್‌, ಉತ್ತಮ ಚಾರ್ಜಿಂಗ್ ಅಭ್ಯಾಸ ಮತ್ತು ಅನಗತ್ಯ ಒತ್ತಡವನ್ನು ತಪ್ಪಿಸುವ ಮೂಲಕ ಒಂದು ಸ್ಮಾರ್ಟ್‌ಫೋನ್ ಅನ್ನು ಹಲವು ವರ್ಷಗಳವರೆಗೆ ಆರಾಮವಾಗಿ ಬಳಸಬಹುದು. ನಿಮ್ಮ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಸಮಯದಲ್ಲಿ ಅಪ್‌ಗ್ರೇಡ್ ಮಾಡಿದರೆ ಹಣದ ಉಳಿತಾಯವೂ ಆಗುತ್ತದೆ ಮತ್ತು ಉತ್ತಮ ಬಳಕೆದಾರ ಅನುಭವವೂ ಸಿಗುತ್ತದೆ. 







Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries