HEALTH TIPS

ಭಾರತ, ಚೀನಾ ಸೇರಿ ರಷ್ಯಾದ ತೈಲ ಖರೀದಿಸುವ ದೇಶಗಳಿಗೆ ಶೇ.100ರಷ್ಟು ಸುಂಕ: ಅಮೆರಿಕ ಸೆನೆಟ್ ನಲ್ಲಿ ಮಸೂದೆ ಅಂಗೀಕಾರ

ವಾಷಿಂಗ್ಟನ್ : ಉಕ್ರೇನ್ ವಿರುದ್ಧದ ಯುದ್ಧಕ್ಕೆ ಆರ್ಥಿಕ ಸಹಾಯ ಮಾಡುವುದನ್ನು ತಡೆಯುವ ಉದ್ದೇಶದಿಂದ, ರಷ್ಯಾ ಇಂಧನ ಉತ್ಪನ್ನಗಳನ್ನು ಖರೀದಿಸುವ ಪ್ರಮುಖ ದೇಶಗಳಾದ ಭಾರತ ಮತ್ತು ಚೀನಾವನ್ನು ಗುರಿಯಾಗಿಸಿಕೊಂಡಿರುವ ಹೊಸ ಮಸೂದೆಯನ್ನು ಅಮೆರಿಕ ಸೆನೆಟ್ ಅಂಗೀಕರಿಸಿದೆ. 


ಈ ಮಸೂದೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ವಿಧಿಸುವ ಅಧಿಕಾರವನ್ನು ಮತ್ತಷ್ಟು ವಿಸ್ತರಿಸಲಿದ್ದು, ರಷ್ಯಾದ ಇಂಧನವನ್ನು ಆಮದು ಮಾಡಿಕೊಳ್ಳುವ ಅಗ್ರ ಐದು ದೇಶಗಳ ಸರಕುಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸಲು ಅವಕಾಶ ನೀಡಲಿದೆ.

'ಲಿಂಡ್ಸೆ ಒ ಗ್ರಹಾಂ ರಷ್ಯಾ ಮತ್ತು ಇರಾನ್ ನಿರ್ಬಂಧ ಕಾಯ್ದೆ 2026' ಎಂದು ಮರುನಾಮಕರಣ ಮಾಡಲಾದ ಈ ಮಸೂದೆಯು 86-11 ಮತಗಳ ಬಹುಮತದಿಂದ ಸೆನೆಟ್‌ ನಲ್ಲಿ ಅಂಗೀಕರಿಸಲ್ಪಟ್ಟಿದೆ. ರಷ್ಯಾ ಜೊತೆಗಿನ ಈ ದೇಶಗಳ ಇಂಧನ ವ್ಯಾಪಾರವು ಉಕ್ರೇನ್ ಯುದ್ಧಕ್ಕೆ ಹಣಕಾಸಿನ ನೆರವು ನೀಡಲು ನೆರವಾಗಲಿದೆ ಎಂದು ಆರೋಪಿಸಿ, ರಷ್ಯಾ ಮತ್ತು ಅದರ ಪೆಟ್ರೋಲಿಯಂ ಉತ್ಪನ್ನಗಳ ಪ್ರಮುಖ ಖರೀದಿದಾರರಾದ ಭಾರತ ,ಚೀನಾ ಸೇರಿದಂತೆ ಹಲವು ದೇಶಗಳನ್ನು ದಂಡಿಸುವ ಗುರಿಯನ್ನು ಮಸೂದೆಯು ಹೊಂದಿದೆ.

ಈ ಮಸೂದೆಯು ಆಗಸ್ಟ್ 31ರಂದು ಆರಂಭವಾಗಲಿರುವ ಜನಪ್ರತಿನಿಧಿ ಸಭೆ(ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ )ಯ ಅಧಿವೇಶನದಲ್ಲಿ ಅನುಮೋದನೆಗಾಗಿ ಮಂಡನೆಯಾಗಲಿದೆ.

ಪ್ರಸ್ತುತ ಚೀನಾ, ಭಾರತ, ಅಜೆರ್ಬೈಜಾನ್, ಹಂಗೇರಿ ಮತ್ತು ಸ್ಲೊವಾಕಿಯಾ ದೇಶಗಳು ರಷ್ಯಾದಿಂದ ತೈಲ ಮತ್ತು ಗ್ಯಾಸ್ ಆಮದು ಮಾಡಿಕೊಳ್ಳುವ ಅಗ್ರ ಐದು ರಾಷ್ಟ್ರಗಳಾಗಿವೆ. ಈ ಮಸೂದೆಯು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ನಾಯಕರು ಮತ್ತು ಅಧಿಕಾರಿಗಳು ಹಾಗೂ ಹಣಕಾಸು ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಅವಕಾಶ ನೀಡಲಿದೆ. ಇದು 1996 ರ ಇರಾನ್ ನಿರ್ಬಂಧ ಕಾಯ್ದೆಯನ್ನೂ ಕೂಡಾ 2031 ರವರೆಗೆ ವಿಸ್ತರಿಸಲು ಅವಕಾಶ ನೀಡಲಿದ್ದು, ಇರಾನ್ನ ಇಂಧನ ವಲಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಕಠಿಣವಾಗಲಿದೆ.

ಜುಲೈ 11 ರಂದು ಉಕ್ರೇನ್ ನ ಕೀವ್ಗೆ ಭೇಟಿ ನೀಡಿ ಮೃತಪಟ್ಟ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಡೆಮಾಕ್ರಾಟ್ ರಿಚರ್ಡ್ ಬ್ಲುಮೆಂಥಾಲ್ ಈ ಮಸೂದೆ ರಚನೆಯ ನೇತೃತ್ವ ವಹಿಸಿದ್ದರು.

ಲಿಂಡ್ಸೆ ಗ್ರಹಾಂ ನಿಧನದ ನಂತರ, ಸೆನೆಟ್ ಸ್ಥಾನಕ್ಕೆ ಯೋಜಿಸಲ್ಪಟ್ಟ ಅವರ ಸಹೋದರಿ ಡಾರ್ಲಿನ್ ಗ್ರಹಾಂ ಈ ಮಸೂದೆಯ ಬಗ್ಗೆ ಪ್ರತಿಕ್ರಿಯಿಸಿ , "ರಷ್ಯಾದ ಆರ್ಥಿಕತೆಯನ್ನು ಕಾಪಾಡುತ್ತಿರುವ ಪ್ರಮುಖ ದೇಶಗಳು ಅಮೆರಿಕದೊಂದಿಗೆ ವ್ಯಾಪಾರ ಮಾಡುವುದೇ ಅಥವಾ ಅಗ್ಗದ ರಷ್ಯಾದ ಇಂಧನವನ್ನು ಖರೀದಿಸುವುದೇ ಎಂಬ ಸರಳ , ನಿರ್ಣಾಯಕ ಆಯ್ಕೆಯನ್ನು ಮಾಡಲು ಈ ಮಸೂದೆ ಒತ್ತಾಯಿಸುತ್ತದೆ" ಎಂದು ಹೇಳಿದ್ದಾರೆ.

ಮತದಾನದ ಬಳಿಕ ಪ್ರತಿಕ್ರಿಯಿಸಿದ ಬ್ಲುಮೆಂಥಾಲ್ , ತಾವು ಮಾಡಿರುವ ಕೆಲಸದ ಬಗ್ಗೆ ಗ್ರಹಾಂ ಹೆಮ್ಮೆಪಡುತ್ತಾರೆ ಎಂದು ಹೇಳಿದ್ದಾರೆ.

ಡೆಮಾಕ್ರಾಟ್‌ ಸಂಸದರ ವಿರೋಧ

ಅಧ್ಯಕ್ಷ ಟ್ರಂಪ್ ತಮ್ಮ ವ್ಯಾಪಾರ ನೀತಿಯಲ್ಲಿ ಸುಂಕಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಈ ಮಸೂದೆಯು ಅವರಿಗೆ ಹೊಸ ಸುಂಕದ ಅಧಿಕಾರಗಳನ್ನು ನೀಡುತ್ತದೆ ಎಂದು ಕೆಲವು ಡೆಮಾಕ್ರಟ್ ಸಂಸದರು ಈ ಮಸೂದೆಯ ಬಗ್ಗೆ ಎಚ್ಚರಿಸಿದ್ದಾರೆ.

ಮೀಕ್ಸ್ ಮತ್ತು ಬೆಯರ್ ಜಂಟಿ ಹೇಳಿಕೆಯಲ್ಲಿ, "ಉಕ್ರೇನ್ ಅನ್ನು ಬೆಂಬಲಿಸಲು ಮತ್ತು ಕಾನೂನುಬಾಹಿರ ಯುದ್ಧಕ್ಕಾಗಿ ರಷ್ಯಾವನ್ನು ದಂಡಿಸಲು ನಮ್ಮ ಸೆನೆಟ್ ಸಹೋದ್ಯೋಗಿಗಳ ತುರ್ತು ಪ್ರಯತ್ನವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ಮಸೂದೆಯಿಂದ ಆ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ. ಬದಲಾಗಿ, ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುವುದರಿಂದ ತಪ್ಪಿಸಿಕೊಳ್ಳಲು ಇದು ಅಧ್ಯಕ್ಷ ಟ್ರಂಪ್ ಅವರಿಗೆ ಅವಕಾಶ ನೀಡುತ್ತದೆ ಮತ್ತು ಅವರ ವಿನಾಶಕಾರಿ ವ್ಯಾಪಾರ ಯುದ್ಧಗಳಲ್ಲಿ ಮತ್ತಷ್ಟು ಸುಂಕಗಳನ್ನು ವಿಧಿಸಲು ದಾರಿ ಮಾಡಿಕೊಡುತ್ತದೆ, ಇದರಿಂದ ಅಮೆರಿಕದ ಜನರೇ ಬೆಲೆ ತೆರಬೇಕಾಗುತ್ತದೆ" ಎಂದು ಹೇಳಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries