ಕಾಸರಗೋಡು: ಕುಂಬಳೆ ಸರ್ಕಾರಿ ಹೈಯರ್ ಸಎಕೆಂಡರಿ ಶಾಲೆಯಲ್ಲಿ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಭಾಗವಹಿಸಿದ್ದ ಕಾರ್ಯಕ್ರಮದ ಸನಿಹ ಪ್ರತಿಭಟನೆ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ ಸೇರಿದಂತೆ ಹತ್ತು ಮಂದಿ ವಿರುದ್ಧ ಕುಂಬಳೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿ.ಆರ್. ಸುನಿಲ್, ಅಶ್ವಿನಿ, ಅಜಿ ಕುಮಾರ್, ಸಂದೀಪ್, ವಿಕ್ರಂ ಪೈ ಹಾಗೂ ಇತರ ಐದು ಮಂದಿ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಸಚಿವರು ಭಾಗವಹಿಸಿದ ಈ ಕಾರ್ಯಕ್ರಮ ನಡೆಯುತ್ತಿದ್ದ ಶಾಲೆಯ ಪ್ರವೇಶದ್ವಾರದತ್ತ ಪ್ರತಿಭಟನಾ ಮೆರವಣಿಗೆಯೊಂದಿಗೆ ಬಂದು ದಿಗ್ಬಂಧನ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆ.
ವೀರ ಸಾವರ್ಕರ್ ಅವರನ್ನು ಸಚಿವ ಎನ್.ಶಂಸುದ್ದೀನ್ ಅವಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಸಚಿವ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಸಚಿವರ ಕಾರ್ಯಕ್ರಮ ಸ್ಥಳಕ್ಕೆ ಮೆರವಣಿಗೆ ನಡೆಸಿದ್ದರು.

