ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಂಗೇರಡ್ಕ ಅಂಗನವಾಡಿ ಆಸುಪಾಸು ಜೂಜಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ. ಇವರಿಂದ ಜೂಜಿಗೆ ಬಳಸಿದ್ದರೆನ್ನಲಾದ 13,700 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕುಂಟಂಗೇರಡ್ಕ ನಿವಾಸಿಗಳಾದ ಕೆ. ಮುರುಗೇಶ, ಅಜಿತ್, ಕಣ್ಣೂರು ಎಡಕ್ಕಾಡ್ ನಿವಾಸಿ ಎನ್. ಪಿ. ದೀವೇಶ್, ಕಣ್ಣಾಪುರಂ ನಿವಾಸಿ ಎನ್. ನಾಗೇಶ್ ಬಂಧಿತರು. ಈ ಪ್ರದೇಶದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಠಾಣೆ ಎಸ್.ಐ. ಕೆ. ಪಿ. ಗಣೇಶನ್ ನೇತೃತ್ವದ ಪೆÇಲೀಸರ ತಂಡ ದಾಳಿ ನಡೆಸಿದೆ.


