HEALTH TIPS

ಎಂಡೋ ಸಂತ್ರಸ್ತರ ಕಲ್ಯಾಣ-14.40 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ

ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಮತ್ತು ಕಲ್ಯಾಣಕ್ಕಾಗಿ ಜಾರಿಗೆ ತರಲಾಗುತ್ತಿರುವ ಸಮಗ್ರ ಪ್ಯಾಕೇಜ್ 'ಸ್ನೇಹ ಸಾಂತ್ವನ' ಯೋಜನೆಯ ಮುಂದುವರಿಕೆ ಭಾಗವಾಗಿ ಸರ್ಕಾರ 14.40 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. 

2026-2027ರ ಹಣಕಾಸು ವರ್ಷದ ರಾಜ್ಯ ಬಜೆಟ್‍ನಲ್ಲಿ ಹಣಕಾಸು ವಿನಂತಿಯನ್ವಯ ಸಾಮಾಜಿಕ ನ್ಯಾಯ ಇಲಾಖೆಯ ಮೂಲಕ ಈ ಮೊತ್ತವನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ಮೊತ್ತದ ಬಹುಪಾಲು ಭಾಗವನ್ನು ಸಂತ್ರಸ್ತರಿಗೆ ನೇರ ಆರ್ಥಿಕ ಪರಿಹಾರಕ್ಕಾಗಿ ಬಳಸಲಾಗುತ್ತಿದೆ. ಪ್ರಸಕ್ತ ಆರ್ಥಿಕ ನೆರವು ಪಡೆಯುತ್ತಿರುವ 5,208 ಎಂಡೋಸಲ್ಫಾನ್ ಫಲಾನುಭವಿಗಳಿಗೆ ಏಪ್ರಿಲ್ 2026 ರಿಂದ ಮಾರ್ಚ್ 2027 ರವರೆಗೆ ಮಾಸಿಕ ಪರಿಹಾರ ಸಹಾಯಕ್ಕಾಗಿ ರೂ. 9,84,31,200 ಮತ್ತು ಪಟ್ಟಿಯಲ್ಲಿ ಸೇರಿಸಲ್ಪಡುವ ನಿರೀಕ್ಷೆಯಿರುವ 1,000 ಫಲಾನುಭವಿಗಳಿಗೆ ರೂ. 2,64,00,000 ಮೊತ್ತವನ್ನು ಮೀಸಲಿಡಲಾಗಿದೆ. 

ಇದರ ಜೊತೆಗೆ, 'ಅಕ್ಷ ಕಿರಣ' ಯೋಜನೆಗೆ ರೂ. 64,76,400 ರೂ. ಮೊತ್ತವನ್ನು  ಸಂತ್ರಸ್ತರ ಆರೈಕೆಗಾಗಿ ನೇಮಿಸಲಾಗಿರುವ 771 ಮಂದಿಯ ಮಾಸಿಕ ಆರ್ಥಿಕ ನೆರವಿಗಾಗಿ ಮೀಸಲಿರಿಸಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಬೆಂಬಲವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, 2026-27 ರ ಶೈಕ್ಷಣಿಕ ವರ್ಷಕ್ಕೆ 400 ಮಕ್ಕಳ ಶೈಕ್ಷಣಿಕ ಪ್ರಯೋಜನಗಳಿಗಾಗಿ ರೂ. 10,05,000 ಮೊತ್ತವನ್ನು ನಿಗದಿಪಡಿಸಲಾಗಿದೆ. ರೂ. ಈ ಪ್ರದೇಶದಲ್ಲಿರುವ 10 ಮಾದರಿ ಮಕ್ಕಳ ಪುನರ್ವಸತಿ ಕೇಂದ್ರಗಳ ಭೌತಿಕ ಪರಿಸ್ಥಿತಿ ಮತ್ತು ಸೇವೆ ಮೇಲ್ದರ್ಜೆಗೇರಿಸಲು ಮತ್ತು ಸುಧಾರಿಸಲು 1,16,87,400 ರೂ. ಮೀಸಲಿರಿಸಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries