HEALTH TIPS

'ವಿಶ್ವ ಸ್ತನ್ಯಪಾನ ವಾರಾಚರಣೆ'-ಜಿಲ್ಲಾ ಮಟ್ಟದ ವಿಚಾರ ಸಂಕಿರಣ, ಜಾಗೃತಿ ಕಾರ್ಯಕ್ರಮ

ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಟ್ಟದ ಐಸಿಡಿಎಸ್ ಘಟಕ ಮತ್ತು ಪೆÇೀಷಣ್ ಅಭಿಯಾನದ ಸಂಯುಕ್ತ ಆಶ್ರಯದಲ್ಲಿ 'ವಿಶ್ವ ಸ್ತನ್ಯಪಾನ ವಾರಾಚರಣೆ' ಅಂಗವಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ಜಾಗೃತಿ ಕಾರ್ಯಕ್ರಮ ಕಾಞಂಗಾಡಿನ ರಾಜ್ ರೆಸಿಡೆನ್ಸಿಯಲ್ಲಿ ಜರುಗಿತು.


ಕಾಸರಗೋಡು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಅಧ್ಯಕ್ಷೆ ರೇಣುಕಾದೇವಿ ತಂಕಚ್ಚಿ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ನಿಶಾಮೋಳ್ ವಿ.ಎ. ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಐಸಿಡಿಎಸ್ ಯೋಜನೆಯ ಸಿಡಿಪಿಒ ಶ್ರೀಜಾ ವಿ. ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಐಸಿಡಿಎಸ್ ಕೋಶದ ಕಾರ್ಯಕ್ರಮ ಅಧಿಕಾರಿ ಜೆಮ್ಲಾ ರಾಣಿ ಎ.ಕೆ. ಸ್ವಾಗತಿಸಿದರು. ಕಾಞಂಗಾಡು ಸಿಡಿಪಿಒ ಸಾಯನಾ ವಂದಿಸಿದರು.

ಈ ಸಂದರ್ಭ 'ಜೀವನದ ಸುಸ್ಥಿರ ಆರಂಭಕ್ಕಾಗಿ ಎದೆಹಾಲುಣಿಸುವಿಕೆ: ಅದನ್ನು ಪರಿಣಾಮಕಾರಿಯಾಗಿಸುವುದು' ಎಂಬ ವಿಷಯವನ್ನು ಕಾಸರಗೋಡು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಬಿಪಿನ್ ಕೆ,  'ಸ್ತನ್ಯಪಾನ ಸ್ನೇಹಿ ಕಾರ್ಯಸ್ಥಳಗಳು ಮತ್ತು ಮಾತೃತ್ವ ಸೌಲಭ್ಯಗಳು' ಎಂಬ ವಿಷಯದ ಕುರಿತು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ)ಅಧ್ಯಕ್ಷೆ,  ವಕೀಲೆ ರೇಣುಕಾದೇವಿ ತಂಕಚ್ಚಿ ಎಸ್ ತರಗತಿ ನಡೆಸಿದರು. 

ವಿಚಾರ ಸಂಕಿರಣದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.  ಪರಪ್ಪ ಐಸಿಡಿಎಸ್ ತಂಡದಿಂದ "ಎದೆಹಾಲುಣಿಸುವಿಕೆ: ಸಂಪೂರ್ಣ ಪೆÇೀಷಣೆ -ತಪ್ಪು ಕಲ್ಪನೆಗಳು ಮತ್ತು ವಾಸ್ತವಾಂಶಗಳು" ಎಂಬ ವಿಷಯದ ಕುರಿತು ಹಾಗೂ ಕಾಞಂಗಾಡಿನ ಹೆಚ್ಚುವರಿ ಐಸಿಡಿಎಸ್ ತಂಡವು ಎದೆಹಾಲುಣಿಸುವಿಕೆಯ ಮಹತ್ವ ಸಾರುವ ಕಿರುನಾಟಕಮ ಪ್ರಸ್ತುತಪಡಿಸಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries