HEALTH TIPS

ಉಕ್ರೇನ್‌ ಮೇಲೆ ರಷ್ಯಾ ಸತತ ದಾಳಿ: 15 ಗಂಟೆ ಸ್ತಬ್ಧಗೊಂಡ ಕೀವ್‌

ಕೀವ್‌: ಉಕ್ರೇನ್‌ ರಾಜಧಾನಿ ಗುರಿಯಾಗಿಸಿ ರಷ್ಯಾ ಪಡೆಗಳು ಶುಕ್ರವಾರವೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದು, ಹಲವು ಅಪಾರ್ಟ್‌ಮೆಂಟ್‌ಗಳು ಮತ್ತು ಗೋದಾಮುಗಳಿಗೆ ಹಾನಿಯಾಗಿದೆ.


'ಗುರುವಾರದಿಂದ ದಾಳಿ ನಡೆಯುತ್ತಿದ್ದು, ಕೀವ್‌ ನಗರ ಸುಮಾರು 15 ಗಂಟೆ ಸ್ತಬ್ಧಗೊಂಡಿತ್ತು' ಎಂದು ಉಕ್ರೇನ್‌ ವಿದೇಶಾಂಗ ಇಲಾಖೆ ತಿಳಿಸಿದೆ.

ಶುಕ್ರವಾರ 14 ಗೋದಾಮುಗಳು, 16 ಖಾಸಗಿ ಕಟ್ಟಡಗಳು, ಮೂರು ಅಪಾರ್ಟ್‌ಮೆಂಟ್‌, ಪವರ್‌ ಗ್ರಿಡ್‌ ಮತ್ತು 16 ವಾಹನಗಳಿಗೆ ಹಾನಿ ಆಗಿದೆ.

'ಕೀವ್‌ ಪ್ರದೇಶದ ಮೇಲೆ ರಾತ್ರಿ ದಾಳಿ ಮಾಡಿದ್ದೇವೆ' ಎಂದು ರಷ್ಯಾ ರಕ್ಷಣಾ ಇಲಾಖೆ ತಿಳಿಸಿದ್ದರೆ, ' ಹಗಲು ಹೊತ್ತಿನಲ್ಲೆ ವಸತಿ ಪ್ರದೇಶ ಗುರಿಯಾಗಿಸಿ ದಾಳಿ ನಡೆದಿದೆ' ಎಂದು ಉಕ್ರೇನ್‌ ಆರೋಪಿಸಿದೆ.

ಉಕ್ರೇನ್‌ನಿಂದಲೂ ದಾಳಿ:

ಗುರುವಾರ ರಾತ್ರಿ ರಷ್ಯಾ 164 ಡ್ರೋನ್‌ ಬಳಸಿ ದಾಳಿ ಮಾಡಿದ್ದರೆ, ರಷ್ಯಾದ 18 ಪ್ರದೇಶಗಳನ್ನು ಗುರಿಯಾಗಿಸಿ ಉಕ್ರೇನ್‌ 512 ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ.

ರಷ್ಯಾದ ಯಾರೊಸ್ಲಾವ್‌ನಲ್ಲಿ ದಾಳಿಯಿಂದ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. 'ಮಾಸ್ಕೋ ಪ್ರಾಂತ್ಯದ ಮೇಲೂ ನಮ್ಮ ಡ್ರೋನ್‌ ದಾಳಿ ಮಾಡಿವೆ' ಎಂದು ಉಕ್ರೇನ್‌ ಸೇನಾ ಅಧಿಕಾರಿ ತಿಳಿಸಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ:

ಶೇ 70ರಷ್ಟು ರಷ್ಯಾ ನಿಯಂತ್ರಣದಲ್ಲಿರುವ ದಕ್ಷಿಣ ಖೆರ್‌ಸಾನ್ ಪ್ರದೇಶದಲ್ಲಿ ಜುಲೈ ನಂತರ ರಷ್ಯಾ, ಬಾಂಬ್‌ ಮತ್ತು ಡ್ರೋನ್‌ ದಾಳಿ ತೀವ್ರಗೊಳಿಸಿದೆ.

'ನಿರಂತರ ದಾಳಿಗಳಿಂದ ಚಳಿಗಾಲದಲ್ಲೂ ವಾತಾವರಣ ಬಿಸಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ತೆರಳಿ' ಎಂದು ಖೆರ್‌ಸಾನ್‌ನ ಸಾವಿರಾರು ನಿವಾಸಿಗಳಿಗೆ ಸೇನಾ ಆಡಳಿತ ಎಚ್ಚರಿಕೆ ನೀಡಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries