ತಿರುವನಂತಪುರ: ತಿರುಓಣಂ ದಿನ ಶಬರಿಮಲೆಗೆ ಬಂದ ಭಕ್ತರಿಗೆ ಸಾಂಪ್ರದಾಯಿಕ 'ಸದ್ಯ'ವನ್ನು ನೀಡಲಿಲ್ಲ ಎಂಬ ವರದಿಗಳನ್ನು ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ಅವರು ಶುಕ್ರವಾರ ನಿರಾಕರಿಸಿದ್ದಾರೆ.
'ಈ ಬಾರಿ ಯಾವುದೇ ಹಣವನ್ನು ಸಂಗ್ರಹಿಸದೆ ದೇವಸ್ವಂ ಮಂಡಳಿಯ ವೆಚ್ಚದಲ್ಲಿಯೇ ಓಣಂ ಅನ್ನು ಸಂಪೂರ್ಣವಾಗಿ ಆಯೋಜಿಸಲಾಗಿತ್ತು.
'ಸದ್ಯ'ವನ್ನು ಸಿಬ್ಬಂದಿ ಮತ್ತು ಭಕ್ತರು ಸೇರಿ ಸುಮಾರು ಮೂರು ಸಾವಿರ ಜನರಿಗೆ ಬಡಿಸಲಾಗಿದೆ. ದೇಗುಲಕ್ಕೆ ಭೇಟಿ ನೀಡುವ ಎಲ್ಲರಿಗೂ ಆಹಾರ ನೀಡಬೇಕೆಂಬ ಉದ್ದೇಶದಿಂದ ಔತಣವನ್ನು ಏರ್ಪಡಿಸಿದ್ದು, ಅನೇಕರು ಇದನ್ನು ನಕಾರಾತ್ಮಕವಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಜನರು ಸುಳ್ಳು ಮಾಹಿತಿಯನ್ನು ಹರಡಬಾರದು' ಎಂದು ಅವರು ತಿಳಿಸಿದ್ದಾರೆ.
ಶಬರಿಮಲೆಯಲ್ಲಿ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾತ್ರ 'ಸದ್ಯ'ವನ್ನು ಬಡಿಸಿದ್ದು, ಭಕ್ತರಿಗೆ ಪುಲಾವ್ ಮಾತ್ರ ನೀಡಲಾಗಿತ್ತು ಎಂದು ವರದಿಗಳು ಹರಿದಾಡಿದ್ದವು.

