ಕುಂಬಳೆ: ಕುಂಬಳೆ ಸರ್ಕಾರಿ ಸೀನಿಯರ್ ಬೇಸಿಕ್ ಶಾಲೆಯಲ್ಲಿ ಕಿಪ್ಬಿ-ಕಿಲಾ ಯೋಜನೆಯಡಿಯಲ್ಲಿ ನಿರ್ಮಿಸಲಾದ 18 ತರಗತಿ ಕೊಠಡಿಗಳನ್ನು ಒಳಗೊಂಡ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭ ಆ. 10 ರಂದು ಬೆಳಿಗ್ಗೆ 9.30 ಕ್ಕೆ ಶಾಲೆಯಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇರಳ ಶಿಕ್ಷಣ ಮತ್ತು ಹಿಂದುಳಿದ ಇಲಾಖೆ ಸಚಿವ ವಕೀಲ. ಎನ್. ಶಂಸುದ್ದೀನ್ ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಸ್ವಾಗತಿಸಲಿದ್ದಾರೆ. ಕಾರ್ಯಕ್ರಮ ಸಮಿತಿ ಕಸ್ವೀನರ್ ಪ್ರಸೂತಿ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡುವರು. ಕಟ್ಟಡ ನಿರ್ಮಾಣ ಯೋಜನೆಯ ವರದಿಯನ್ನು ಕುಂಬಳೆ ಗ್ರಾಮ ಪಂಚಾಯತಿ ಎಲ್.ಐ.ಡಿ & ಇ.ಡಬ್ಲ್ಯು ಸಹಾಯಕ ಅಭಿನಂತ ಮುಹಮ್ಮದ್ ಶಿಹಾಬ್ ಮಂಡಿಸಲಿದ್ದಾರೆ.
ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸಾಬು ಅಬ್ರಹಾಂ, ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಅಬ್ದುಲ್ಲ ಕುಂಞ ಚಿರ್ಕಳ, ಕುಂಬಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬಲ್ಕಿಸ್, ಜಿಲ್ಲಾ ಪಂಚಾಯತಿ ಸದಸ್ಯ ಅಜೀಜ್ ಕಳತೂರು, ಕಾಸರಗೋಡು ಬ್ಲಾಕ್ ಪಂಚಾಯತಿ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಕುಂಬಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಪಿ. ಖಾಲಿದ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧಕ್ಷೆ ಇನಾಸ್ ಫವಾಸ್, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಪೃಥ್ವಿರಾಜ್ ಜಗನ್ನಾಥ ಶೆಟ್ಟಿ ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಭಟ್, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪಿ.ಟಿ.ಎ. ಉಪಾಧ್ಯಕ್ಷ ಹಮೀದ್ ಕೊಯಿಪ್ಪಾಡಿ ಮೊದಲಾದವರು ಮಾತನಾಡಲಿದ್ದಾರೆ.
ಸಮಾರಂಭದಲ್ಲಿ ಕಾಸರಗೋಡು ಡಿ.ಡಿ.ಇ. ಪಿ.ವಿ. ರಫೀಕ್, ಡಯಟ್ ಪ್ರಾಂಶುಪಾಲ ಡಾ. ರಘುರಾಮ್ ಭಟ್, ಕುಂಬಳೆ ?.?.?. ಅಶೋಕ್ ಎಂ., ಕ್ಯೆಟ್ ಜಿಲ್ಲಾ ಸಂಯೋಜಕ ರೋಜಿ ಜೋಸೆಫ್, ಕುಂಬಳೆ ಎಚ್.ಎಸ್.ಎಸ್.ಪ್ರಾಂಶುಪಾಲೆ ಸಿಂಧು, ಕುಂಬಳೆ ಬಿ.ಪಿ.ಸಿ. ಶೀನಾ, ಜಿ.ಎಚ್.ಎಸ್.ಎಸ್. ಕುಂಬಳೆ ಮುಖ್ಯೋಪಾಧ್ಯಾಯ ಶೈಲಜಾ, . ಕುಂಬಳೆ ಪಿ.ಟಿ.ಎ. ಅಧ್ಯಕ್ಷ ಪ್ರಸಾದ್ ಕುಮಾರ್, ಎಸ್.ಎಂ.ಸಿ. ಅಧ್ಯಕ್ಷ ಸಮೀರ್ ಕುಂಬಳೆ, ಎಂ.ಪಿ.ಟಿ.ಎ. ಅಧ್ಯಕ್ಷೆ ಅಸಿಯಮ್ಮ, ಜಿ.ಎಚ್.ಎಸ್.ಎಸ್. ಕುಂಬಳೆ ಪಿ.ಟಿ.ಎ. ಅಧ್ಯಕ್ಷ ಮೊಯ್ದಿನ್ ಅಜೀಜ್, ಎಸ್.ಎಂ.ಸಿ. ಅಧ್ಯಕ್ಷ ಅಹ್ಮದ್ ಅಲಿ ಕುಂಬಳೆ, ಜಿ.ಎಸ್.ಬಿ.ಎಸ್. ಕುಂಬಳೆ ನೌಕರ ಸಂಘದ ಕಾರ್ಯದರ್ಶಿ ದೀಪಾ ಪಿ.ಎಂ. ಮೊದಲಾದವರು ಭಾಗವಹಿಸಲಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
1913 ರಲ್ಲಿ ಸ್ಥಾಪಿತವಾದ ಜಿ.ಎಸ್.ಬಿ.ಎಸ್. ಕುಂಬಳೆಯು, ಕುಂಬಳೆ ಉಪಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಪ್ರೀ-ಪ್ರೈಮರಿಯಿಂದ ಏಳನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಈ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಕಟ್ಟಡವು ಮಹತ್ವದ ಮುನ್ನಡೆಯಾಗಲಿದೆ.
ಈ ಹಿನ್ನಲೆಯಲ್ಲಿ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜಿ.ಎಸ್.ಬಿ.ಎಸ್. ಕುಂಬಳೆ ಮುಖ್ಯೋಪಾಧ್ಯಾಯ ವಿಜಯಕುಮಾರ್ ಪಿ.,ಪಂ.ಅಧ್ಯಕ್ಷ ಪಿವಿ ಅಬ್ದುಲ್ ಖಾದರ್, ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಎಕೆ ಆರೀಫ್, ಸದಸ್ಯ ರಮೇಶ ಭಟ್,ಪಿಟಿಎ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷೆ ರಸೀನಾ ಟೀಚರ್,ಆರ್ಥಿಕ ಸಮಿತಿ ಅಧ್ಯಕ್ಷ ಅಹಮ್ಮದಲಿ ಕುಂಬ್ಳೆ ಉಪಸ್ಥಿತರಿದ್ದು ಮಾಹಿತಿ ನೀಡಿದರು.



