HEALTH TIPS

2025ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ | 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ; ಈ ಬಾರಿ ಖೇಲ್‌ರತ್ನ ಪ್ರಶಸ್ತಿ ಇಲ್ಲ

ನವದೆಹಲಿಕೇಂದ್ರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯವು 2025ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಮಂಗಳವಾರ ಪ್ರಕಟಿಸಿದೆ. ವಿಶ್ವಕಪ್ ವಿಜೇತ ಚೆಸ್ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಹಾಗೂ ಅತ್ಲೀಟ್ ತೇಜಸ್ವಿನ್ ಶಂಕರ್ ಸಹಿತ 17 ಕ್ರೀಡಾಪಟುಗಳು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 


ಈ ಬಾರಿ ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಯಾವೊಬ್ಬ ಕ್ರೀಡಾಪಟುವನ್ನು ಆಯ್ಕೆ ಮಾಡಲಾಗಿಲ್ಲ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಅರ್ಜುನ ಪ್ರಶಸ್ತಿ

ತೇಜಸ್ವಿನ್ ಶಂಕರ್-ಅತ್ಲೆಟಿಕ್ಸ್

ಮುಹಮ್ಮದ್ ಅಜ್ಮಲ್-ಅತ್ಲೆಟಿಕ್ಸ್

ಪ್ರಿಯಾಂಕಾ ಗೋಸ್ವಾಮಿ-ಅತ್ಲೆಟಿಕ್ಸ್

ಟ್ರೀಸಾ ಜೋಲಿ-ಬ್ಯಾಡ್ಮಿಂಟನ್

ಪುಲ್ಲೇಲ ಗಾಯತ್ರಿ ಗೋಪಿಚಂದ್-ಬ್ಯಾಡ್ಮಿಂಟನ್

ನರೇಂದರ್-ಬಾಕ್ಸಿಂಗ್

ವಿದಿತ್ ಸಂತೋಶ್ ಗುಜರಾತಿ-ಚೆಸ್

ದಿವ್ಯಾ ಜಿತೇಂದ್ರ ದೇಶ್‌ಮುಖ್-ಚೆಸ್

ಧನುಶ್ ಶ್ರೀಕಾಂತ್-ಡೀಫ್ ಶೂಟಿಂಗ್

ಲಾಲ್‌ರೆಂಸಿಯಾಮಿ-ಹಾಕಿ

ರಾಜ್‌ಕುಮಾರ್ ಪಾಲ್-ಹಾಕಿ

ಸುರ್ಜೀತ್-ಕಬಡ್ಡಿ

ಪೂಜಾ-ಕಬಡ್ಡಿ

ರುದ್ರಾಂಶ್ ಖಂಡೇಲ್‌ವಾಲ್-ಪ್ಯಾರಾ-ಶೂಟಿಂಗ್

ಏಕ್ತಾ ಭ್ಯಾನ್-ಪ್ಯಾರಾ ಅತ್ಲೆಟಿಕ್ಸ್

ಅರವಿಂದ ಸಿಂಗ್-ರೋವಿಂಗ್

ಅಖಿಲ್ ಶಿಯೋರನ್-ಶೂಟಿಂಗ್

*ಅರ್ಜುನ ಪ್ರಶಸ್ತಿ(ಜೀವಮಾನ)2025

ಅರುಮೈನಾಯಗಂ-ಫುಟ್ಬಾಲ್

*ದ್ರೋಣಾಚಾರ್ಯ ಪ್ರಶಸ್ತಿ(ಖಾಯಂ ವಿಭಾಗ)

ಪರ್ವೀರ್ ಸಿಂಗ್-ಅತ್ಲೆಟಿಕ್ಸ್

ಚೋಟೆ ಲಾಲ್ ಯಾದವ್-ಬಾಕ್ಸಿಂಗ್

ನೇಹಾ ನಂದಕುಮಾರ್ ಚವಾಣ್-ಶೂಟಿಂಗ್

*ದ್ರೋಣಾಚಾರ್ಯ ಪ್ರಶಸ್ತಿ(ಜೀವಮಾನ ವಿಭಾಗ)

ಧರ್ಮೇಂದ್ರ ಸಿಂಗ್ ಯಾದವ್-ಬಾಕ್ಸಿಂಗ್

ವೀರೇಂದರ್ ಕುಮಾರ್-ಕುಸ್ತಿ

ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ 2025

ಆರ್ಮಿ ಪ್ಯಾರಾಲಿಂಪಿಕ್ ನೋಡ್, ಪುಣೆ-ಸ್ಪೋರ್ಟ್ಸ್ ಪ್ರೊಮೋಶನ್ ಹಾಗೂ ಡೆವಲಪ್‌ಮೆಂಟ್

2025ರಲ್ಲಿ ಯಾವ ಕ್ರೀಡಾಪಟುವಿಗೂ ಖೇಲ್‌ರತ್ನ ಪ್ರಶಸ್ತಿ ಇಲ್ಲ

ಭಾರತದ ಅತ್ಯುನ್ನತ ಕ್ರೀಡಾ ಗೌರವ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಗೆ 2025ರಲ್ಲಿ ಯಾರನ್ನೂ ಆಯ್ಕೆ ಮಾಡಲಾಗಿಲ್ಲ. ಸರಕಾರವು ಪ್ರತಿಷ್ಠಿತ ಪ್ರಶಸ್ತಿಗೆ ಯಾವ ಕ್ರೀಡಾಪಟುವಿನ ಹೆಸರನ್ನು ಶಿಫಾರಸು ಮಾಡಿಲ್ಲ.

1991-92ರಲ್ಲಿ ಪ್ರಶಸ್ತಿ ಸ್ಥಾಪಿಸಿದ ನಂತರ ಮೂರನೇ ಬಾರಿ ಖೇಲ್‌ರತ್ನ ಪ್ರಶಸ್ತಿಗೆ ಯಾವ ಕ್ರೀಡಾಪಟುವನ್ನು ಆಯ್ಕೆ ಮಾಡಲಾಗಿಲ್ಲ. 2008 ಹಾಗೂ 2014ರಲ್ಲೂ ಇದೇ ರೀತಿಯ ನಿದರ್ಶನ ಕಂಡು ಬಂದಿತ್ತು.

ಹೊಸದಿಲ್ಲಿಯಲ್ಲಿ 2025ರ ಡಿ.12ರಂದು ನಡೆದಿದ್ದ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆಯಲ್ಲಿ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ, ಭಾರತದ ಮಹಿಳೆಯರ ವಿಶ್ವಕಪ್ ವಿಜೇತ ಕ್ರಿಕೆಟ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಉಪ ನಾಯಕಿ ಸ್ಮತಿ ಮಂಧಾನ ಹೆಸರನ್ನು ಖೇಲ್‌ರತ್ನಕ್ಕೆ ಪರಿಗಣಿಸಲು ಚರ್ಚಿಸಲಾಗಿತ್ತು. ಆದರೆ ಇದೀಗ ಯಾವೊಬ್ಬ ಕ್ರೀಡಾಪಟುವಿಗೆ ಖೇಲ್‌ರತ್ನ ನೀಡಲಾಗಿಲ್ಲ. ಮುಹಮ್ಮದ್ ಶಮಿ 2023ರಲ್ಲಿ ಖೇಲ್‌ರತ್ನ ಪ್ರಶಸ್ತಿ ಪಡೆದ ಕೊನೆಯ ಕ್ರಿಕೆಟಿಗನಾಗಿದ್ದಾರೆ.

2024ರಲ್ಲಿ ಮನು ಭಾಕರ್(ಶೂಟಿಂಗ್), ಡಿ.ಗುಕೇಶ್(ಚೆಸ್), ಹರ್ಮನ್‌ಪ್ರೀತ್ ಸಿಂಗ್(ಹಾಕಿ) ಹಾಗೂ ಪ್ರವೀಣ್‌ಕುಮಾರ್(ಪ್ಯಾರಾ ಅತ್ಲೆಟಿಕ್ಸ್)ಮೇಜರ್‌ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

2021ರ ಆಗಸ್ಟ್ 21ರ ತನಕ ರಾಜೀವ್ ಗಾಂಧಿ ಖೇಲ್‌ರತ್ನ ಎಂದು ಕರೆಯಲ್ಪಡುತ್ತಿದ್ದ ಖೇಲ್ ರತ್ನ ಪ್ರಶಸ್ತಿ ವಿಜೇತರು ಪದಕ ಹಾಗೂ ಸ್ಮರಣಿಕೆಯ ಜೊತೆಗೆ 25 ಲಕ್ಷ ರೂ. ನಗದು ಬಹುಮಾನ ಪಡೆಯುತ್ತಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries