HEALTH TIPS

ಓಣಂ: ಜನದಟ್ಟಣೆಯಿಂದ ಕೂಡಿದ ಸಪ್ಲೈಕೋ ಮೇಳಗಳು: 207 ಕೋಟಿ ರೂ.ಗಳನ್ನು ದಾಟಿದ ವಹಿವಾಟು

ತಿರುವನಂತಪುರಂ: ಓಣಂ ಹಿನ್ನೆಲೆಯಲ್ಲಿ ಸಪ್ಲೈಕೋ ಮೇಳಗಳು ಭಾರೀ ಜನಮನ್ನನಣೆ ಗಳಿಸುತ್ತಿದೆ. ಆಗಸ್ಟ್ 1 ರಿಂದ 19 ರ ಮಧ್ಯಾಹ್ನದವರೆಗಿನ ಅಂಕಿಅಂಶಗಳ ಪ್ರಕಾರ, ಸಪ್ಲೈಕೋದ ವಹಿವಾಟು 207 ಕೋಟಿ ರೂ.ಗಳನ್ನು ದಾಟಿದೆ. 


ಇದರಲ್ಲಿ, ಸಬ್ಸಿಡಿ ರೂಪದಲ್ಲಿ 72 ಕೋಟಿ ರೂ.ಗಳು ಮತ್ತು ಸಬ್ಸಿಡಿಯೇತರ ರೂಪದಲ್ಲಿ 135 ಕೋಟಿ ರೂ.ಗಳು ಬಂದಿವೆ. ಕಳೆದ 19 ದಿನಗಳಲ್ಲಿ ಸುಮಾರು 26 ಲಕ್ಷ ಗ್ರಾಹಕರು ಸಪ್ಲೈಕೋದ ಮಾರಾಟ ಮಳಿಗೆಗಳು ಮತ್ತು ಓಣಂ ಮೇಳಗಳಿಗೆ ಭೇಟಿ ನೀಡಿದ್ದಾರೆ.

ಓಣಂ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶೇಷವಾಗಿ ಆಯೋಜಿಸಲಾದ ಮೇಳಗಳಿಂದ ಸುಮಾರು ಎರಡು ಕೋಟಿ ರೂ.ಗಳ ವಹಿವಾಟು ನಡೆದಿದೆ.

ತಿರುವನಂತಪುರಂ, ಕೋಝಿಕ್ಕೋಡ್ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ನಡೆದ ಮೆಗಾ ವ್ಯಾಪಾರ ಮೇಳಗಳಲ್ಲಿ ಇದುವರೆಗೆ ಕೋಝಿಕ್ಕೋಡ್ ಬೀಚ್‍ನಲ್ಲಿ ನಡೆದ ಮೇಳದಲ್ಲಿ ಅತಿ ಹೆಚ್ಚು ವಹಿವಾಟು ದಾಖಲಾಗಿದೆ. ಇಲ್ಲಿ 32 ಲಕ್ಷ ರೂ. ವಹಿವಾಟು ದಾಖಲಾಗಿದೆ.

ಪಡಿತರ ಅಂಗಡಿಗಳು, ಸಪ್ಲೈಕೋ, ಗ್ರಾಹಕ ಆಹಾರ ಮಳಿಗೆಗಳು ಮತ್ತು ಓಣಂ ಮಾರುಕಟ್ಟೆಗಳಲ್ಲಿ ಸಮಂಜಸ ಬೆಲೆಯಲ್ಲಿ ಅಕ್ಕಿ ಮತ್ತು ಇತರ ವಸ್ತುಗಳನ್ನು ಖರೀದಿಸಲು ಜನದಟ್ಟಣೆ ಇದೆ. ಓಣಂಗಾಗಿ ಅಥಮ್ ಕಿಟ್, ಉತ್ರಾದಮ್ ಕಿಟ್, ತಿರುಓಣಂ ಕಿಟ್ ಮತ್ತು ವಿಶೇಷ ಸಿಗ್ನೇಚರ್ ಕಿಟ್ ಸೇರಿದಂತೆ ಸಪ್ಲೈಕೋ ಉತ್ತಮ ಕೊಡುಗೆಗಳನ್ನು ಸಿದ್ಧಪಡಿಸಿದೆ.

ಸಾರ್ವಜನಿಕ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಅಕ್ಕಿಯ ಬೆಲೆ ಕೆಜಿಗೆ 60 ರೂ.ಗಿಂತ ಹೆಚ್ಚಿದ್ದರೆ, ಸಪ್ಲೈಕೋ ಮತ್ತು ಓಣಂ ಮಾರುಕಟ್ಟೆಗಳಲ್ಲಿ ಅದು 33 ರೂ. ಆಗಿದೆ. ಪಡಿತರ ಅಂಗಡಿಗಳಲ್ಲಿ ಹೆಚ್ಚುವರಿ ಅಕ್ಕಿ 26 ರೂ. ಬಹುತೇಕ ಅರ್ಧದಷ್ಟು ಬೆಲೆ. ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಸಾರ್ವಜನಿಕ ಮಾರುಕಟ್ಟೆಯಲ್ಲಿನ ಹೆಚ್ಚಿನ ಬೆಲೆಗಳಿಂದ ಓಣಂ ಜನರಿಗೆ ಪರಿಹಾರವಾಗಿದೆ.

ಓಣಂ ಸಂದರ್ಭದಲ್ಲಿ 1,65,932 ಟನ್ ಅಕ್ಕಿಯನ್ನು ಹೆಚ್ಚುವರಿಯಾಗಿ ಸಪ್ಲೈಕೋ ಮತ್ತು ಸಾರ್ವಜನಿಕ ವಿತರಣಾ ಕೇಂದ್ರಗಳಿಗೆ ತಲುಪಿಸಲಾಗಿದೆ. ಇತರ ಸಬ್ಸಿಡಿ ವಸ್ತುಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ತಲುಪಿಸಲಾಗಿದೆ.

ಸಪ್ಲೈಕೋದಲ್ಲಿ ಸಬ್ಸಿಡಿ ವಸ್ತುಗಳ ಬೆಲೆಗಳು ಹೀಗಿವೆ: ಸಣ್ಣ ಹೆಸರು 85, ಉದ್ದು 87, ಕಡಲೆ 63, ಪಚ್ಚೆಹೆಸರು 68, ತೊಗರಿಬೇಳೆ 83, ಜಯ ಅಕ್ಕಿ 33, ಕುರುವ ಅಕ್ಕಿ 33, ಮಟ್ಟ ಅಕ್ಕಿ 33, ಬಿಳ್ತಿಗೆ ಅಕ್ಕಿ 29,  ಕೊಬ್ಬರಿ ಎಣ್ಣೆ(ಪ್ರತಿ ಲೀಟರ್ ಗೆ)229, ಕೊತ್ತಂಬರಿ ಅರ್ಧಕಿಲೋ 45 ರೂ.ಗಳಂತೆ ಲಭ್ಯವಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries