ಕಾಸರಗೋಡು: ವ್ಯಾಪಾರಿಯ ತಲೆಗೆ ಹೊಡೆದು ಹಣ ದರೋಡೆಗೈದ ಪ್ರಕರಣದ ಆರೋಪಿಯನ್ನು 22 ವರ್ಷಗಳ ನಂತರ ಪೆÇಲೀಸರು ಬಂಧಿಸಿದ್ದಾರೆ. ಕಣ್ಣೂರು ಆಲವಿಲ್ ನಿವಾಸಿ ಎಚ್. ಮುನೀರ್ ಯಾನೆ ಮುನ್ನ (54) ಬಂಧಿತ. ಹೊಸದುರ್ಗದ ಕಾಫಿಯಾ ಟ್ರೇಡರ್ಸ್ ಎಂಬ ಹೆಸರಿನ ಕಾಡುತ್ಪನ್ನ ಮಾರಾಟದಂಗಡಿ ಮಾಲಿಕ ಸಿ. ಅಬ್ದುಲ್ಲ ಹಾಜಿ ಎಂಬವರು 2004 ಜನವರಿ 9ರಂದು ರಾತ್ರಿ ಅಂಗಡಿ ಮುಚ್ಚಿ ಸ್ಕೂಟರ್‍ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ದಾರಿ ಮಧ್ಯೆ ಹೊಸದುರ್ಗ ಪೇಟೆಯಲ್ಲಿ ತಂಡವೊಂದು ಅಬ್ದುಲ್ಲ ಹಾಜಿ ಅವರ ತಲೆಗೆ ಹೊಡೆದು 80 ಸಾವಿರ ರೂ. ಒಳಗೊಂಡಿದ್ದ ಬ್ಯಾಗ್ ಎಗರಿಸಿತ್ತು. ಆಗ ಅಬ್ದುಲ್ಲ ಬೊಬ್ಬೆ ಹೊಡೆದಾಗ ಜನರು ಅಲ್ಲಿಗೆ ಓಡಿ ಬರುವಷ್ಟರಲ್ಲಿ ಆಕ್ರಮಿಗಳು ಅಲ್ಲಿಂದ ಪರಾರಿಯಾಗಿದ್ದರು.
ಅದಕ್ಕೆ ಸಂಬಂಧಿಸಿದ ಹೊಸದುರ್ಗ ಪೆÇಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ತಮಿಳ್ನಾಡು ನಿವಾಸಿ ಆರ್. ಶರವಣನ್, ಪಳಯಂಗಾಡಿಯ ಥೋಮಸ್ ಸೆಬಾಸ್ಟಿನ್, ಹೊಸದುರ್ಗದ ಅಶ್ರಫ್, ಅಂಬಲತ್ತರದ ಪಿ.ಎಂ.ಮುನೀರ್, ಕಣ್ಣೂರು ಅಲವಿಲ್ ನಿವಾಸಿ ಹಾಗೂ ಪ್ರಸಕ್ತ ಹೊಸದುರ್ಗದಲ್ಲಿ ವಾಸಿಸುತ್ತಿರುವ ಎಚ್. ಮುನೀರ್ ಅಲಿಯಾಸ್ ಮುನ್ನಾ ಎಂಬವರನ್ನು ಬಂಧಿಸಿದ್ದರು. ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಮುನೀರ್ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, 22 ವರ್ಷಗಳ ನಂತರ ವಯನಾಡಿನಿಂದ ಬಂಧಿಸಲಾಗಿದೆ. ಈತನಿಗೆ ನ್ಯಾಯಾಂಗ ವಿಧಿಸಲಾಗಿದೆ.

