ಮಂಜೇಶ್ವರ: ಕೊಡ್ಲಮೊಗರು ದೈಗೋಳಿಯಲ್ಲಿರುವ ಸಾಯಿನಿಕೇತನ್ ಸೇವಾಶ್ರಮದ ನಿವಾಸಿ, ಉತ್ತರಪ್ರದೇಶದ ಅಗ್ರಾ ಪ್ರಯಾಗ್‍ರಾಜ್ ನಿವಾಸಿ ವಿಷ್ಣು ಕುಮಾರ್ (25) ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಗುರುವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 2ರ ನಡುವಿನ ಕಾಲಾವಧಿಯಲ್ಲಿ ವಿಷ್ಣುಕುಮಾರ್ ನಾಪತ್ತೆಯಾಗಿರುವುದಾಗಿ ಆಶ್ರಮದ ಸಿಬ್ಬಂದಿ ಕೆ.ಅದೀಶ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

