ಉಪ್ಪಳ: ಮಂಗಲ್ಪಾಡಿ ಪಂಚಾಯತಿ ಆಡಳಿತ ಸಮಿತಿ ಮತ್ತು ಮಂಗಲ್ಪಾಡಿ ಕೃಷಿ ಭವನದ ವತಿಯಿಂದ ಕೃಷಿಕರ ದಿನ ಆಚರಿಸಲಾಯಿತು. ಮಂಗಲ್ಪಾಡಿಯ ಅತ್ಯುತ್ತಮ 24 ಕೃಷಿಕರನ್ನು ಸನ್ಮಾನಿಸಲಾಯಿತು. ಉಪ್ಪಳ ಪೇಟೆಯಿಂದ ಪ್ರಾರಂಭವಾದ ವರ್ಣರಂಜಿತ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಮಂಗಲ್ಪಾಡಿ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್‍ಮಾನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸೈಪುಲ್ಲಾ ತಂಙಳ್ ಮುಖ್ಯ ಅತಿಥಿಯಾಗಿದ್ದರು.
ಹಿರಿಯ ಕೃಷಿಕ ಬಿ. ಸುಫಲಾ ಚಂದ್ರ ನಾಯಕ್ ಉಪಸ್ಥಿತರಿದ್ದರು. ಶೆರಿನ್ ಮುಲ್ಲರ್, ಕೃಷಿ ಡೆಪ್ಯುಟಿ ಡೈರೆಕ್ಟರ್ ಅರ್ಜಿತಾ ಪಿ.ವಿ ಕೃಷಿ ಯೋಜನೆಯ ವಿವರಣೆ ನೀಡಿದರು. ಶಮೀನಾ ಟೀಚರ್, ಅಪೆÇ್ಪೀಲೋ ಉಮ್ಮರ್, ಅಬ್ದುಲ್ ರಜಾಕ್, ಅಬ್ದುಲ್ ಅಜೀಜ್ ಮರಿಕ್ಕೆ, ಜಮೀಲಾ ಸಿದ್ದೀಕ್, ಫಾತಿಮತ್ ಸುಹರಾ, ಅಬ್ದುಲ್ ರಹಿಮಾನ್ ಶೆರೀಫ್, ಶಾಹುಲ್ ಹಮೀದ್ ಬಂದ್ಯೋಡ್, ರಾಜೇಶ್ ನಾಯಕ್, ಬಾಬು ಕುಬಣೂರು, ರುಬೀನಾ ನೌಫಲ್, ನಿಶಾಂತ್ ಪಿ.ವಿ, ಸಜೀಶ್ ಕುಮಾರ್ ಕೆ, ವಸಂತ ಕುಮಾರ್ ಮಯ್ಯ ಮಾತನಾಡಿದರು. ಹಿರಿಯ ಕೃಷಿಕರಾದ ಬಿ. ಸುಫಲಾ ಚಂದ್ರ ನಾಯಕ್, ಗಿರಿಜಾ, ಮೊಯಿದೀನ್ ಹಾಜಿ, ತಿಮ್ಮಪ್ಪ ಶೆಟ್ಟಿ, ದೇವಕಿ, ಅಬ್ದುಲ್ ಲತೀಫ್, ಎಂ.ಕೆ. ಅಶೋಕ್ ಕುಮಾರ್ ಹೊಳ್ಳ, ವಾಸುದೇವ ಬಳ್ಳಕ್ಕುರಾಯ, ಅಭಿರಾಮ್ ಭಂಡಾರಿ, ಎಚ್. ಮಹಿಂ ನಾಯಕ್, ಫಕ್ರುದ್ದೀನ್ ಅಹಮದ್ ಇಕ್ಬಾಲ್ ಕಾದರ್, ಸತ್ತಾರ್, ಇಬ್ರಾಹಿಂ ಸೂಪಿ, ವಕೀಲ. ಕಾಸಿಂ, ಶೀನಾ ಶೆಟ್ಟಿ, ಅಬ್ದುಲ್ಲಾ ಮಕ್ಕಿ, ಸನೀನಾ ಅಬ್ದುಲ್ ಹಮೀದ್, ಶ್ಯಾಮಲಾ, ಉಬೈದು ರಹಿಮಾನ್, ಮುಹಮ್ಮದ್ ಹನೀಫ್, ಸದಾಶಿವ ಬಿ, ಉದಯ ಕುಮಾರ್, ತಿಮ್ಮಪ್ಪ ಭಂಡಾರಿ, ಸೀತಾರಾಮ ಭಂಡಾರಿ ಇವರನ್ನು ಸನ್ಮಾನಿಸಲಾಯಿತು. ಕೃಷಿ ಅಧಿಕಾರಿ ಅರುಣ್ ಪ್ರಸಾದ್ ಕೆ.ಎಂ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ರಾಜೇಶ್ ಕೆ. ವಂದಿಸಿದರು.

.jpg)
.jpg)
