HEALTH TIPS

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: 24x7 ಭದ್ರತೆಗಾಗಿ ₹7.5 ಕೋಟಿ ಬಿಡ್ ಕರೆದ NTA

 ವದೆಹಲಿ:ನೀಟ್-ಯುಜಿ (ಓಇಇಖಿ-Uಉ) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ ತೀವ್ರ ಟೀಕೆಗೆ ಗುರಿಯಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಓಖಿಂ), ಪರೀಕ್ಷಾ ವ್ಯವಸ್ಥೆಯನ್ನು ಭದ್ರತೆ ಬಲಪಡಿಸಲು ಪ್ರಮುಖ ಹೆಜ್ಜೆ ಇಟ್ಟಿದೆ. ದೆಹಲಿಯಲ್ಲಿರುವ ತನ್ನ ಮುಖ್ಯ ಕಚೇರಿ, ಪ್ರಾದೇಶಿಕ ಕಚೇರಿಗಳು ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ಸಂಗ್ರಹಿಸುವ ರಹಸ್ಯ ಕೊಠಡಿಗಳ 24/7 ಭದ್ರತೆಗಾಗಿ ₹7.5 ಕೋಟಿ ಮೌಲ್ಯದ ಟೆಂಡರ್ ಅನ್ನು ಎನ್‌ಟಿಎ ಆಹ್ವಾನಿಸಿದೆ.


ಟೆಂಡರ್‌ ಪಡೆಯಲು ಬಯಸುವ ಆಸಕ್ತ ವೃತ್ತಿಪರ ಭದ್ರತಾ ಸಂಸ್ಥೆಗಳು ಆಗಸ್ಟ್ 17ರ ಮಧ್ಯಾಹ್ನ 3 ಗಂಟೆಯ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದೇ ದಿನ ತಾಂತ್ರಿಕ ಬಿಡ್‌ಗಳನ್ನು ತೆರೆಯಲಾಗುತ್ತದೆ.

ಆರಂಭದಲ್ಲಿ ಈ ಭದ್ರತಾ ಒಪ್ಪಂದವು 2 ವರ್ಷಗಳ ಕಾಲ ಇರಲಿದ್ದು, ಸಂಸ್ಥೆಯ ಕಾರ್ಯಕ್ಷಮತೆಯನ್ನು ಆಧರಿಸಿ ಮತ್ತೆರಡು ವರ್ಷಗಳ ಕಾಲ ವಿಸ್ತರಿಸುವ ಅವಕಾಶವಿದೆ.

ದೆಹಲಿಯ ಮಿಂಟೋ ರಸ್ತೆಯಲ್ಲಿರುವ ಎನ್‌ಟಿಎ ಪ್ರಧಾನ ಕಚೇರಿ, ಓಖ್ಲಾ ಪ್ರಾದೇಶಿಕ ಕಚೇರಿ, ಸರ್ವರ್ ರೂಮ್‌ಗಳು, ಸ್ಟ್ರಾಂಗ್ ರೂಮ್‌ಗಳು ಮತ್ತು ದಾಖಲೆ ಕೊಠಡಿಗಳಿಗೆ ಪೂರ್ಣ ಪ್ರಮಾಣದ ಭದ್ರತೆ ಒದಗಿಸುವುದನ್ನು ಒಳಗೊಂಡಿದೆ.

ಅರ್ಹತಾ ಮಾನದಂಡ ಹಾಗೂ ಗುಣಮಟ್ಟಕ್ಕೆ ಆದ್ಯತೆ (QCBS ಮಾದರಿ)

  • ಕೇವಲ ಕಡಿಮೆ ದರಕ್ಕೆ ಹರಾಜು ಕೂಗುವ ಸಂಸ್ಥೆಗಳಿಗೆ ಆದ್ಯತೆ ನೀಡುವ ಬದಲು, ಎನ್‌ಟಿಎ ಈ ಬಾರಿ 'ಕ್ವಾಲಿಟಿ ಮತ್ತು ಕಾಸ್ಟ್ ಬೇಸ್ಡ್ ಸೆಲೆಕ್ಷನ್' (QCBS) ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ.

  • ಪರೀಕ್ಷಾ ವ್ಯವಸ್ಥೆಯ ಸಂವೇದನಾಶೀಲತೆಯನ್ನು ಗಮನದಲ್ಲಿಟ್ಟುಕೊಂಡು, ತಾಂತ್ರಿಕ ಗುಣಮಟ್ಟಕ್ಕೆ ಶೇಕಡಾ 70ರಷ್ಟು ಮತ್ತು ಆರ್ಥಿಕ ಬಿಡ್‌ಗೆ ಶೇಕಡಾ 30 ರಷ್ಟು ಆದ್ಯತೆ ನೀಡಲಾಗುತ್ತದೆ.

  • ಅರ್ಜಿ ಸಲ್ಲಿಸುವ ಸಂಸ್ಥೆಗಳು ಕನಿಷ್ಠ 5 ವರ್ಷಗಳ ಕಾಲ ಭದ್ರತಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು ಹಾಗೂ ಕಳೆದ 3 ಹಣಕಾಸು ವರ್ಷಗಳಲ್ಲಿ ಸರಾಸರಿ ₹10 ಕೋಟಿ ವಾರ್ಷಿಕ ವಹಿವಾಟು ನಡೆಸಿರಬೇಕು.

  • ವಿಮಾನ ನಿಲ್ದಾಣಗಳು, ಕೇಂದ್ರ ಸರ್ಕಾರಿ ಸಂಸ್ಥೆಗಳು ಅಥವಾ ಮೆಟ್ರೋ ವ್ಯವಸ್ಥೆಗಳಂತಹ ಹೆಚ್ಚಿನ ಭದ್ರತೆಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಕಡ್ಡಾಯ.

ತಂತ್ರಜ್ಞಾನ ಆಧಾರಿತ ಕಣ್ಗಾವಲು:

ಜಿಪಿಎಸ್ ಮತ್ತು ಬಯೋಮೆಟ್ರಿಕ್: ಸೆಕ್ಯುರಿಟಿ ಗಾರ್ಡ್‌ಗಳ ಗಸ್ತು ಪರಿಶೀಲನೆಗೆ GPS ಟ್ರ್ಯಾಕಿಂಗ್ ವ್ಯವಸ್ಥೆ, ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಮತ್ತು ಡಿಜಿಟಲ್ ಇನ್ಸಿಡೆಂಟ್ ರಿಪೋರ್ಟಿಂಗ್ ವ್ಯವಸ್ಥೆ ಇರಲಿದೆ.

ತಪಾಸಣೆ ವ್ಯವಸ್ಥೆ: ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಹ್ಯಾಂಡ್-ಹೆಲ್ಡ್ ಹಾಗೂ ಡೋರ್-ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳ ಮೂಲಕ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ.

ಗೌಪ್ಯತೆ ಕಾಯ್ದುಕೊಳ್ಳುವುದು: ಭದ್ರತಾ ಸಿಬ್ಬಂದಿ ಪರೀಕ್ಷಾ ಸಾಮಗ್ರಿಗಳು ಹಾಗೂ ಐಟಿ ನೆಟ್‌ವರ್ಕ್‌ಗಳ ಕುರಿತು ಅತ್ಯಂತ ಕಟ್ಟುನಿಟ್ಟಿನ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಒಪ್ಪಂದದ ಅವಧಿ ಮುಗಿದ ನಂತರವೂ ಈ ನಿಯಮ ಅನ್ವಯಿಸುತ್ತದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries