HEALTH TIPS

ಸಂಸತ್ತಿನಲ್ಲಿ ಚಂದಾ ಚೋರಿ ಕಿಚ್ಚು: ಅಮಿತ್ ಶಾ ವಿರುದ್ಧ ಸಮರಕ್ಕೆ ವಿಪಕ್ಷಗಳ ತಂತ್ರ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಪುನರಾರಂಭಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಹಾಗೂ 'ಇಂಡಿಯಾ' ಮೈತ್ರಿ ಒಕ್ಕೂಟದ ನಡುವೆ ಮತ್ತೊಂದು ಸುತ್ತಿನ ತೀವ್ರ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. 


ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಅಯೋಧ್ಯೆ ರಾಮಮಂದಿರದ 'ಚಂದಾ ಚೋರಿ' (ದೇಣಿಗೆ ಕಳವು) ಆರೋಪವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿದ್ದರೆ, ಇತ್ತ ಕೇಂದ್ರ ಸರ್ಕಾರ, ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಕನಿಷ್ಠ 6 ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಲು ಕಾರ್ಯತಂತ್ರ ರೂಪಿಸಿದೆ.

ಸಂಸತ್ತಿನಲ್ಲಿ ಚಂದಾ ಚೋರಿ ಕಿಚ್ಚು: ಅಮಿತ್ ಶಾ ವಿರುದ್ಧ ಸಮರಕ್ಕೆ ವಿಪಕ್ಷಗಳ ತಂತ್ರ

ಒಂದು ಸಾಲಿನಲ್ಲಿಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಮಮಂದಿರ ದೇಣಿಗೆ ಅಕ್ರಮ ಮತ್ತು ಅಮಿತ್ ಶಾ ರಾಜೀನಾಮೆ ವಿಚಾರವಾಗಿ ವಿಪಕ್ಷಗಳು ತೀವ್ರ ಹೋರಾಟಕ್ಕೆ ಸಜ್ಜಾಗಿವೆ.

ಏನು? ಏಕೆ? ಹೇಗೆ?


ಸಂಸತ್ತಿನಲ್ಲಿ ವಿಪಕ್ಷಗಳು ಯಾವ ವಿಷಯಗಳಿಗಾಗಿ ಹೋರಾಡುತ್ತಿವೆ?

ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹ ಮತ್ತು ಅಯೋಧ್ಯೆ ರಾಮಮಂದಿರದ 'ಚಂದಾ ಚೋರಿ' ಆರೋಪಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸದನದಲ್ಲಿ ಪ್ರತಿಭಟಿಸಲು ಸಿದ್ಧವಾಗಿವೆ.


ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಏಕೆ ಹಕ್ಕುಚ್ಯುತಿ ಪ್ರಸ್ತಾವನೆ ಮಂಡಿಸಲು ಮುಂದಾಗಿದೆ?

ಸಂಸತ್ ಭವನದ ಮುಂದೆ ಪಪ್ಪು ಯಾದವ್ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ, ರಾಮಮಂದಿರ ದೇಣಿಗೆ ಸಂಗ್ರಹದ ಹೆಸರಿನಲ್ಲಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.


ನೀಟ್ ಪರೀಕ್ಷೆ ಅಕ್ರಮದ ವಿಷಯವಾಗಿ ವಿಪಕ್ಷಗಳ ಬೇಡಿಕೆ ಏನು?

ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್ ಮತ್ತು ದಾಳಿಯ ಕುರಿತು ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಸ್ಪಷ್ಟನೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿವೆ.


ಸರ್ಕಾರವು ಸಂಸತ್ತಿನಲ್ಲಿ ಯಾವ ವಿಧೇಯಕಗಳನ್ನು ಮಂಡಿಸಲು ಯೋಜಿಸಿದೆ?

ಗದ್ದಲದ ನಡುವೆಯೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 6 ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಲು ಸರ್ಕಾರ ಕಾರ್ಯತಂತ್ರ ರೂಪಿಸಿದೆ.


ಸಂಸತ್ತಿನ ಕಲಾಪ ಯಾವ ದಿನದಿಂದ ಪುನರಾರಂಭವಾಗಲಿದೆ?

ಸಂಸತ್ತಿನ ಮುಂಗಾರು ಅಧಿವೇಶನವು ಸೋಮವಾರದಿಂದ ಪುನರಾರಂಭಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಸಂಘರ್ಷದ ಸಾಧ್ಯತೆಯಿದೆ.

ಪ್ರಮುಖ ಅಂಕಿಅಂಶಗಳು

6ಸರ್ಕಾರ ಮಂಡಿಸಲು ಉದ್ದೇಶಿಸಿರುವ ಪ್ರಮುಖ ವಿಧೇಯಕಗಳ ಸಂಖ್ಯೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಸದನದ ಒಳಗೆ-ಹೊರಗೂ ಹೋರಾಟಕ್ಕೆ ಸಜ್ಜು

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೋಲಿಸರು ನಡೆಸಿದ ಲಾಠಿ ಚಾರ್ಜ್‌ ಮತ್ತು ಪೆಲೆಟ್ ಗನ್‌ ದಾಳಿ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಸ್ಪಷ್ಟನೆ ನೀಡಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಲಾಪಕ್ಕೆ ಅಡ್ಡಿಪಡಿಸಲು ವಿಪಕ್ಷಗಳು ಸಜ್ಜಾಗಿವೆ.

ಜತೆಗೆ, ರಾಮಮಂದಿರ ದೇಣಿಗೆ ಕಳವು (ಚಂದಾ ಚೋರಿ) ಕುರಿತು ವಿನೂತನ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿವೆ.

ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಅಸ್ತ್ರ

ಸಂಸತ್‌ ಭವನ ಮುಂಭಾಗ ಸಂಸದ ಪಪ್ಪು ಯಾದವ್ ಖಾವಿ ಧರಿಸಿ ನಡೆಸಿದ ಪ್ರತಿಭಟನೆ ಮತ್ತು ಅದರಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದಕ್ಕೆ ಆಡಳಿತಾರೂಢ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ರಾಮಮಂದಿರ ಕಾಣಿಕೆ ಕಳವು ಪ್ರಕರಣ ಖಂಡಿಸಿ ಪಪ್ಪು ಯಾದವ್, ಕೇಸರಿ ಬಟ್ಟೆ ತೊಟ್ಟು, ಹುಂಡಿ ಹಿಡಿದು ಕುಳಿತಿದ್ದರು. ವಿಪಕ್ಷ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಸಂಸದರು ಹುಂಡಿಗೆ ಹಣ ಹಾಕಿದ್ದರು. ಆ ಹಣವನ್ನು ಪಪ್ಪು ಯಾದವ್ ಕೇಸರಿ ಧಿರಿಸಿನ ಜೇಬಿಗೆ ಹಾಕಿಕೊಂಡಿದ್ದರು. ಇದಕ್ಕೆ ಆಡಳಿತಾರೂಢ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸನಾತನ ಧರ್ಮ ಮತ್ತು ಹಿಂದೂ ಸಂಪ್ರದಾಯವನ್ನು ವಿಪಕ್ಷಗಳು ಅಪಮಾನಿಸಿವೆ ಎಂದು ಆರೋಪಿಸಿ ಬಿಜೆಪಿ ನಾಯಕ ಅನುರಾಗ್ ಠಾಕೂರ್, ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆ ಮಂಡಿಸುವಂತೆ ಸಭಾಪತಿಗೆ ಪತ್ರ ಬರೆದಿದ್ದಾರೆ.

ಸಂಸತ್ತಿನ ಮುಂದಿರುವ ಪ್ರಮುಖ ವಿಧೇಯಕಗಳು:

ಗದ್ದಲದ ನಡುವೆಯೂ ಸರ್ಕಾರವು ಈ ಕೆಳಗಿನ ವಿಧೇಯಕಗಳನ್ನು ಅಂಗೀಕರಿಸಲು ಮುಂದಾಗಿದೆ

  • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ತಿದ್ದುಪಡಿ) ಮಸೂದೆ

  • ಸುಪ್ರೀಂ ಕೋರ್ಟ್(ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ (ಲೋಕಸಭೆಯಲ್ಲಿ ಅಂಗೀಕೃತ)

  • ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ (ಲೋಕಸಭೆಯಲ್ಲಿ ಅಂಗೀಕೃತ)

  • ಭಾರತೀಯ ಸಾಂಖ್ಯಿಕ ಸಂಸ್ಥೆ (ISI) ಮಸೂದೆ

  • ಬ್ಯಾಂಕರ್‌ಗಳ ಪುಸ್ತಕಗಳ ಪುರಾವೆ ಮಸೂದೆ

  • ಹೆಚ್ಚುವರಿ ಅನುದಾನ ಬೇಡಿಕೆಗಳ ವಿನಿಯೋಗ ಮಸೂದೆ

ಇದರ ಜೊತೆಗೆ ವಾರದ ಮಧ್ಯಭಾಗದಲ್ಲಿ ವಿದೇಶಿ ದೇಣಿಗೆ ನಿಯಂತ್ರಣ (FCRA) ತಿದ್ದುಪಡಿ ವಿಧೇಯಕ ಕೂಡ ಮಂಡನೆಯಾಗುವ ಸಾಧ್ಯತೆಯಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries