HEALTH TIPS

ನೇಪಾಳ, ಚೀನಾ ಪ್ರವಾಹ ಪರಿಹಾರಕ್ಕೆ ವಿಶ್ವಸಂಸ್ಥೆಯಿಂದ 2 ದಶಲಕ್ಷ ಡಾಲರ್ ಬಿಡುಗಡೆ

ವಿಶ್ವಸಂಸ್ಥೆ: ನೇಪಾಳ ಮತ್ತು ಚೀನಾದಲ್ಲಿ ಅನೇಕ ಜೀವಗಳನ್ನು ಬಲಿ ಪಡೆದ ಹಾಗೂ ವ್ಯಾಪಕ ವಿನಾಶವನ್ನುಂಟು ಮಾಡಿದ ಭೀಕರ ಪ್ರವಾಹದ ಬಗ್ಗೆ ವಿಶ್ವಸಂಸ್ಥೆಯ ಮಹಾನಿರ್ದೇಶಕ ಆಂಟೋನಿಯೊ ಗುಟೆರಸ್ ತೀವ್ರ ಕಳವಳ ಮತ್ತು ದುಃಖ ವ್ಯಕ್ತಪಡಿಸಿದ್ದು, ಪರಿಹಾರ ಕಾರ್ಯಾಚರಣೆಗಾಗಿ ವಿಶ್ವಸಂಸ್ಥೆಯು 2 ದಶಲಕ್ಷ ಡಾಲರ್‍ಗಳ ಆರಂಭಿಕ ನಿಧಿಯನ್ನು ಬಿಡುಗಡೆಗೊಳಿಸಿದೆ. 


ನೇಪಾಳದಲ್ಲಿ ಸರಕಾರ ನಡೆಸುತ್ತಿರುವ ಪರಿಹಾರ ಕಾರ್ಯಗಳಿಗೆ ವಿಶ್ವಸಂಸ್ಥೆಯು ಬೆಂಬಲ ನೀಡುತ್ತಿದ್ದು, ವಿಪತ್ತಿನ ಪ್ರಮಾಣವನ್ನು ಅಂದಾಜಿಸುವುದು ಮತ್ತು ತುರ್ತು ನೆರವು ತಲುಪಿಸುವ ಕೆಲಸ ಮಾಡುತ್ತಿದೆ. ವಿಶ್ವಸಂಸ್ಥೆಯ ತಂಡಗಳು ಮತ್ತು ಮಾನವೀಯ ಪಾಲುದಾರರು ಸಂತ್ರಸ್ತ ಸಮುದಾಯಗಳಿಗೆ ನೆರವಾಗಲು ಅಗತ್ಯ ಸಾಮಗ್ರಿಗಳು ಹಾಗೂ ಸಿಬ್ಬಂದಿಯನ್ನು ರವಾನಿಸುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ನೇಪಾಳದ ರಸುವಾ ಜಿಲ್ಲೆ ಮತ್ತು ನುವಾಕೋಟ್ ಜಿಲ್ಲೆಯ ಕೆಳಭಾಗದ ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದ್ದು ಹೆಚ್ಚಿನ ಬೆಂಬಲ ನೀಡಲು ವಿಶ್ವಸಂಸ್ಥೆ ಸಿದ್ಧವಾಗಿದೆ . ತುರ್ತು ತಂಡಗಳನ್ನು ನಿಯೋಜಿಸಲಾಗಿದ್ದು ಅಧಿಕಾರಿಗಳು ಮತ್ತು ಪ್ರಾದೇಶಿಕ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಂಯೋಜನಾ ಕಚೇರಿ ತಿಳಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries